ಗಾಯಕಿ, ಲೇಖಕಿ ಜಯಾ ರಾಜಶೇಖರ್ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ವೀಣೆ ಮತ್ತು ಗಮಕದಲ್ಲಿ ಸೀನಿಯರ್ ಆದ ಅವರು 1933 ಅಕ್ಟೋಬರ್ 12 ತಿಪಟೂರಿನಲ್ಲಿ ಜನಿಸಿದರು. ಐದು ಪ್ರಸಾರ ನಾಟಕಗಳು, ಪುಟಾಣಿಗೆ ಪುರಾಣ ಕಥೆಗಳು, ಪುಟಾಣಿಗೆ ಶರಣರ ಕಥೆಗಳು, ’ಎಲೆ ಮಲ್ಲಪ್ಪಶೆಟ್ಟರ’ ಜೀವನಚರಿತ್ರೆ ಮತ್ತು ’ಮರಳಿ ಬಂದ ಮಧುರಮಾ’ ಅವರ ಪ್ರವಾಸ ಕಥನವಾಗಿದೆ. ’ಗಮಕ ಕಲಾ ನಿಧಿ’ ಸಂಪಾದಿತ ಕೃತಿ.’ ’ಹಬ್ಬದ ಉಡುಗೊರೆ ಮತ್ತು ಇತರ ಪ್ರಸಾರ ನಾಟಕಗಳು, ಶೂನ್ಯ ಸಂಪಾದನೆಯಲ್ಲಿ ಸ್ತ್ರೀ ಪಾತ್ರಗಳು, ಮೊಗ್ಗೆಯ ಮಾಯಿ ದೇವರ ಶತಕತ್ರಯ, ಶೂನ್ಯ ಸಂಪಾದನೆಯ ಸಂಗ್ರಹ, ಪ್ರಭುದೇವರ ಶೂನ್ಯ ಸಂಪಾದನೆ, ಅಕ್ಕಮಹಾದೇವಿ ಅವರ ಜೀವನ ಚರಿತ್ರೆ’ಯನ್ನು ರಚಿಸಿದ್ಧಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಮೈಸೂರು ಜೆ.ಎಸ್.ಎಸ್.ಅವರ ಕದಳಿ ಶ್ರೀ ಮತ್ತಿತರ ಪ್ರಶಸ್ತಿಗಳು ಸಂದಿವೆ.