ಲೇಖಕಿ ಇಂದಿರಾ ಶಿವಣ್ಣ ಅವರು 1949 ಜೂನ್ 25ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಲೀ ತಾಲ್ಲೂಕಿನ ವಿಜಯಪುರದಲ್ಲಿ ಜನಿಸಿದರು. ಕನ್ನಡ ಹಾಗೂ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿರುವ ಇವರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇಂದಿರಾ ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಇವರ ಪ್ರಮುಖ ಕೃತಿಗಳೆಂದರೆ ಮಧುರ, ಸಿಂಧೂರ, ಭ್ರಮರ, ಗಗನದಿಂದ ಗೂಡಿಗೆ, ಹಾರಬಲ್ಲೆವು ನಾವು (ಕಾದಂಬರಿ), ಚಂದಿರಾ, ಸರಪಳಿಗಳು (ಕಥಾ ಸಂಕಲನ), ಭಾವಗಳು ಸಾಲುಗಳಾದಾಗ, ಪರಿವೇಷ, ಮನೋರೇಖೆಗಳು (ಕವನ ಸಂಕಲನಗಳು), ತಿರುಮಲಾಂಬ, ಶ್ಯಾಮಲಾದೇವಿ, ನುಗ್ಗೆಹಳ್ಳಿ ಪಂಕಜ (ಜೀವನ ಚರಿತ್ರೆ) ನಗರ್ತ ಜನಾಂಗ, ಶಿವಾಚಾರ ನಗರ್ತ, ಶಿವಾಚಾರ ನಗರ್ತರು (ಸಂಶೋಧನೆ), ಹಾಲೆಂಡ್‌ನಿಂದ ಲಂಡನ್‌ವರೆಗೆ, ನಿಗೂಢಗಳ ನಿಚ್ಚಣಿಕೆ ಏರಿ (ಪ್ರವಾಸ), ಟಿ. ಸಿದ್ಧಲಿಂಗಯ್ಯ (ಮಕ್ಕಳ ಸಾಹಿತ್ಯ) ಮುಂತಾದವು.
ಇವರಿಗೆ ಕೆಂಪೇಗೌಡ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಸದ್ಭಾವನಾ ಪ್ರಶಸ್ತಿ, ಯಶೋಧರಾ ದಾಸಪ್ಪ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.