ಕನ್ನಡದ ಖ್ಯಾತ ಲೇಖಕ, ಸಾಹಿತಿ ಪತ್ರಕರ್ತ ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್. ಪತಿ ಲಂಕೇಶ್ ಅವರ ಜನಪ್ರಿಯತೆಗೆ ಮಾತ್ರ ಜೊತೆಯಾಗದ ಇಂದಿರಾ, ಲಂಕೇಶ್ ಅವರ ಹುಂಬತನಗಳೊಂದಿಗೆ ಬದುಕು ನಡೆಸಿದವರು. ಅವರೊಂದಿಗಿನ ತಮ್ಮ ಬದುಕಿನ ಅನುಭವಗಳನ್ನು ಹುಳಿಮಾವು ಮತ್ತು ನಾನು ಎಂಬ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ.