ಸಂತೋಷ್ ಎಸ್ ಕೆ. ಸಣ್ಣಕೊಟ್ರಪ್ಪನವರ ಎಂಬ ಮನೆ ಹೆಸರಿನ ಆಂಗ್ಲ ಸಂಕ್ಷೇಪ ಎಸ್ ಕೆ. ಊರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಡಾಕೊಳ್ಳ. ಹುಟ್ಟಿದೂರು ಮತ್ತು ಹುಬ್ಬಳ್ಳಿಯಲ್ಲಿ ಶಿಕ್ಷಣ. ಸಿನಿಮಾ ಹುಚ್ಚಿಗೆ ಬಿದ್ದು ಬೆಂಗಳೂರು ಪಯಣ. ಅಲ್ಲೇ ದೂರ ಶಿಕ್ಷಣದಲ್ಲಿ ಇತಿಹಾಸ ಸ್ನಾತಕೋತ್ತರ ಪದವಿ. ಕಳೆದ ಒಂದೂವರೆ ದಶಕದಿಂದ ಸಿನಿಮಾಗಳಲ್ಲಿ ನಿರ್ದೇಶನದ ಪಟ್ಟುಗಳ ಕಲಿಕೆ. ಕೋಡ್ಲು ರಾಮಕೃಷ್ಣ, ರವಿ ಶ್ರೀವತ್ಸ, ರಿಚರ್ಡ್ ಕ್ಯಾಸ್ಟಲಿನೊ, ವಿಜಯ್ ಪ್ರಸಾದ್ ಅವರಂತ ದಿಗ್ಗಜರಲ್ಲದೇ ಇನ್ನೂ ಹಲವರ ಜತೆ ಕೆಲಸ ಮಾಡಿದ ಅನುಭವ. ಜೆಂಟಲ್ಮ್ಯನ್ ಸಿನಿಮಾಕ್ಕೆ ಸಂಭಾಷಣೆ ಬರೆದ ಅನುಭವ. ಅದರ ಜೊತೆಗೆ ಯುಗಾದಿ ಗೌಡನ ಪ್ರಣಯ ಪ್ರಸಂಗ ಅನ್ನುವ ಕಾದಂಬರಿ ಬರೆದಿದ್ದಾರೆ.