ಕವಯತ್ರಿ, ಪತ್ರಕರ್ತೆ ಹೇಮಾ ವೆಂಕಟ್ ಅವರು 1973 ರ ಜುಲೈ 31 ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ತಂದೆ ಶಂಕರನಾರಾಯಣ, ತಾಯಿ ಹೇಮಾವತಿ. ’ನನ್ನ ಕಾಯುವ ನೆರಳು, ಹುಡುಕುವ ಆಟ’ ಪ್ರಮುಖ ಕೃತಿಗಳು. ’ಕಡೆಂಗೋಡ್ಲು ಶಂಕರಭಟ್ ಸ್ಮಾರಕ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನಕ್ಕೆ ಭಾಜನರಾಗಿದ್ಧಾರೆ.