ಲೇಖಕ ಹೆಚ್. ಶ್ರೀಧರ ರಾವ್ ಅವರು ಹೊಸನಗರ ತಾಲ್ಲೂಕಿನ ಹುಲುಗಾರು ಎಂಬ ಪುಟ್ಟ ಹಳ್ಳಿಯವರು. ಅವರು ಬೆಳೆದದ್ದು ಹಾಗೂ ಶಿಕ್ಷಣವನ್ನು ಮುಗಿಸಿದ್ದು ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದಲ್ಲಿ. ಬ್ಯಾಂಕ್ ಉದ್ಯೋಗಿಯಾಗಿರುವ ಅವರು ಬ್ಯಾಂಕ್ ಆಫ್ ಮೈಸೂರಿನ ಬೆಂಗಳೂರು ವಲಯ ಕಚೇರಿಯ ಮುಖ್ಯಸ್ಥರಾಗಿ ನಿವೃತ್ತಿಯನ್ನು ಹೊಂದಿದರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿ ಇರುವ ಶ್ರೀಯುತರು ತಮ್ಮ ಬಿಡುವಿನ ವೇಳೆಯಲ್ಲಿ ಸಣ್ಣ ಕಥೆಗಳ ಸಂಗ್ರಹ, ಸ್ವಾನುಭವದ ಕಥನ ಹೀಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.