ಲೇಖಕ ಎಚ್.ಎಂ. ರವಿಕಾಂತ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದವರು. ತಾಯಿ ಹೊಸಮನೆ ನಾಗಮ್ಮ, ತಂದೆ ಹೆಚ್.ವಿ. ಮಾನಪ್ಪನಾಯ್ಕರ. ಸಾಮಾನ್ಯ ಕೃಷಿಕ ಕುಟುಂಬದವರು. ಬಿ.ಕಾಂ, ಪದವೀಧರ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದು, ಕೊಪ್ಪದಲ್ಲಿ 'ಕವಿಶೈಲ' ಪತ್ರಿಕೆಯ ಸಂಪಾದಕರಾಗಿದ್ದಾರೆ. ನಿತ್ಯ ಸಹ್ಯಾದ್ರಿ' ಎನ್ನುವ ದಿನಪತ್ರಿಕೆ ಆರಂಭಿಸಿದ್ದಾರೆ. ಎರಡು ಅವಧಿಗೆ ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಹಿರೇಕೊಡಿಗೆಯಲ್ಲಿ ಕುವೆಂಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಅಕ್ಷರ ಪ್ರಾಥಮಿಕ ಶಾಲೆ ಸ್ಥಾಪಿಸಿದ್ದಾರೆ. ಹಿರೇಕೊಡಿಗೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರವು ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.
ಕೃತಿಗಳು; ಎಂ.ಎಸ್ ದ್ಯಾವೇಗೌಡ' ಜೀವನ ಚರಿತ್ರೆ, ಶಿಲಾಬಾಲಕಿ (ಕವನ ಸಂಕಲನ) , ಶ್ರೀ ವೀರಭದ್ರಸ್ವಾಮಿ ಸ್ತುತಿ, ಶ್ರೀ ತಿಮರಾಂತಕಿ ಸುಪ್ರಭಾತ, ಶ್ರೀ ಕು೦ಚೂರು ದುರ್ಗಾಪರಮೇಶ್ವರಿ ಭಕ್ತಿಲಹರಿ.
ಪ್ರಶಸ್ತಿ-ಪುರಸ್ಕಾರಗಳು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಕ್ಷರಗಾರುಡಿಗ ಪ್ರಶಸ್ತಿ ಲಭಿಸಿವೆ.