About the Author

ಎಸ್.ಪಿ.ಪೂರ್ಣಿಮಾ ಅವರು ಗುಡಿಬಂಡೆ ಪೂರ್ಣಿಮಾ ಎಂದೇ ಪ್ರಸಿದ್ಧರಾದ ಕಾದಂಬರಿಗಾರ್ತಿ, ವೈಜ್ಞಾನಿಕ ಬರಹಗಾರ್ತಿ. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. 1951 ಏಪ್ರಿಲ್ 17 ರಂದು ಶ್ರವಣಬೆಳಗೊಳದಲ್ಲಿ ಜನಿಸಿದರು. ಸುಬಂಧುಶ್ರೀ, ಮಲ್ಲಿನಾಥ, ಬಂಧಮುಕ್ತ, ಮಾಗಿದ ಫಲ, ಪರಾಗ, ಒಳಗಿನದೇ ಬೇರೆ, ಭ್ರಮೆ, ಸೆಲೆ, ಬೇಟೆ, ಮೇಳ, ಅಲೆಯಾಳ, ಭಾವ ಸಂವಾದ, ತನುವ ತಂಪಿನ ತವಕ, ರತ್ನದೀಪ, ಕಾಮಪ್ರೇಮ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. ನನಗನಿಸಿದ್ದು, ಬೇರು, ಕಣ್ಣುರೆಪ್ಪೆ,  ನೂರಾರು ಹನಿ ಗವಿತೆಗಳು, ನಲವತ್ತರ ನಂತರ ನಾನು, ಪರಂಪರೆಯೊಡನೆ ಪಿಸುಮಾತು ಕಾವ್ಯ ಸಂಕಲನಗಳನ್ನು ಹೊರತಂದಿದ್ಧಾರೆ. ಎರಡು ನಾಟಕಗಳು ಇವರ ಪ್ರಮುಖ ನಾಟಕ. ಅಂಗಳದಲ್ಲಿ ನಕ್ಷತ್ರ, ಲೇಖಕಿಯ ವೀಡಿಯೊ ಇವರ ಸಣ್ಣಕತೆಗಳ ಸಂಗ್ರಹ. ಬದುಕಿನ ಬೇರು ವಂಶವಾಹಿ, ಬೆಳಗೊಳದ ಶಾಸ್ತಿ ಪರಂಪರೆ, ಕರ್ನಾಟಕದ ಪ್ರಾಕೃತ ದಾರ್ಶನಿಕರು, ಸಾಂಗತ್ಯ ಸಮೀಕ್ಷೆ ಕೃತಿಗಳು ಅವರ ವೈಜ್ಞಾನಿಕ ಅಧ್ಯಯನ ಕೃತಿಗಳು. ಕ.ಸಾ.ಪ. ಕೋಲಾರ ಜಿಲ್ಲಾ ಸಮಿತಿ ಅಧ್ಯಕ್ಷರು,ಸಾಕ್ಷರತಾ ಸಮಿತಿ ಅಧ್ಯಕ್ಷರು, ಜಯನಗರ ಜೈನಮಿಲನ್ ಸಂಘದ ಅಧ್ಯಕ್ಷರಾಗಿದ್ದರು. 
ಕರ್ನಾಟಕ ಲೇಖಕಿಯರ ಸಂಘದಲ್ಲಿ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಸ್ಥಾಪನೆಯಾಗಿದ್ದು ಶ್ರೀ ಗೋಮಟೇಶ್ವರ ವಿದ್ಯಾಪೀಠ ರಾಷ್ಟ್ರೀಯ ಪ್ರಶಸ್ತಿ, ಶ್ರೀ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ವಿದ್ವತ್ ಪ್ರಶಸ್ತಿ, ಶ್ರೀ ಶಾರದಾ ಸೇವಾಶ್ರೀ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ, ಮಾತೆ ಶಾರದಾದೇವಿ ಪ್ರಶಸ್ತಿ, ತಾಲ್ಲೂಕು ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳು ಲಭಿಸಿವೆ. 

ಗುಡಿಬಂಡೆ ಪೂರ್ಣಿಮಾ (ಎಸ್. ಪಿ. ಪೂರ್ಣಿಮಾ)

(17 Apr 1951)

BY THE AUTHOR