ಧರ್ಮಾನಂದ ಶಿರ್ವ ಅವರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲಬೆಟ್ಟುವಿನವರು. ಅಕ್ಟೋಬರ್ 11, 1957ರಲ್ಲಿ ಜನನ. ಪಿಯುಸಿವರೆಗಿನ ಶಿಕ್ಷಣವನ್ನು ಶಿರ್ವದ ಹಿಂದೂ ಜ್ಯೂನಿಯರ್ ಕಾಲೇಜಿನಲ್ಲಿ ಮುಗಿಸಿ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಆರಂಭದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲ ತಿಂಗಳು ಕಾರ್ಯನಿರ್ವಹಿಸಿ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕಿನಲ್ಲಿಯೂ ಸೇವೆಯನ್ನು ನೀಡಿದ್ದು, ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು ಅವರ ಮೊದಲ ಕಥೆ 'ಬದುಕು-ಬಯಕೆ', ಪ್ರಜಾವಾಣಿಯ ರವಿವಾರದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿತ್ತು. ಸಾಕಷ್ಟು ಕಥೆಗಳು ಸುಧಾ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಮಂಗಳ, ನವಭಾರತ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿರುತ್ತದೆ.