ಪ್ರೊ. ಧರಣೇಂದ್ರ ಕುರಕುರಿ ಮೂಲತಃ ಧಾರವಾಡ ತಾಲೂಕಿನ ಮುಗದ ಗ್ರಾಮದವರು. ಇವರದು ರೈತಾಪಿ ಕುಟುಂಬ. ರಾಜ್ಯದ ವಿವಿಧೆಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳಲ್ಲಿ ಹಿಂದಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಶಿರಸಿಯಲ್ಲಿ ‘ಸನ್ಮತಿ ಸಾಹಿತ್ಯ ಪೀಠ’ ಮೂಲಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ.
ಕೃತಿಗಳು: ಇವರ ಮೊದಲನೇ ಕವನ ಸಂಕಲನ-ಹರಕು ಪುಸ್ತಕ. ನೀರಾಗ ಕುಂತೇನ, ನೆನಕೊಂತ, ಹೊಸಾ ಕಾಲ ಬರತಾವ, ನಾ ಕವಿ ಅಲ್ಲ, ಕುಂಚ ಮತ್ತು ಬಣ್ಣ, ಶಬ್ದವಾಯಿತು, ನಕ್ಷತ್ರ ಮತ್ತು ಆಯ್ದ ಕವನಗಳು (ಕವನ ಸಂಕಲನಗಳು),
ಅನುವಾದಿತ ಕೃತಿಗಳು: ಕನ್ನಡದಿಂದ ಹಿಂದಿಗೆ: ಚಾವುಂಡರಾಯ ವೈಭವ (ಕಾದಂಬರಿ) ಪಿ. ಲಂಕೇಶ ಅವರ ಕಥೆಗಳ ಅನುವಾದ (ಪತ್ಥರ್ ಪಿಘಲನೆ ಕಿ ಫಡಿ, ಓಂ ಣಮೋ (ಶಾಂತಿನಾಥ ದೇಸಾಯಿ ಅವರ ಕಾದಂಬರಿ), ಜುರ್ಮಾನ (ಬಸವರಾಜ ಸಾದರ ಕತೆಗಳು), ಶೇರ್ ಬಜಾರ ಮೇಂ ಗಂಗಾ (ಕೆ.ಆರ್. ಪ್ರಕಾಶರ ನಾಟಕ), ಉದ್ಧಾರ ಏವಂ ಬಜಾರ (ದಿವಾಕರ ಹೆಗಡೆ ಅವರ ನಾಟಕ), ದೃಷ್ಟಿ (ನಾ. ಮೊಗಸಾಲೆ ಅವರ ಕಾದಂಬರಿ), ಸೀತಾಯನ (ಚಂಪಾ ಅವರ ಕವಿತೆಗಳು), ಜಡೆಂ (ವೆಂಕಟೇಶ ಮಾಚನೂರು ಅವರ ಕಥೆಗಳು), ಬಗಾವರ ಏವಂ ಅನ್ಯ ಕಹಾನಿಯಾಂ (ಕೇಶವ ರೆಡ್ಡಿ ಹಂದ್ರಾಳರ ಕಥೆಗಳು) ಹಾಗೂ ಹಿಂದಿಯಿಂದ ಕನ್ನಡಕ್ಕೆ: ನಾವು ಮೆಚ್ಚಿದ ಹಿಂದಿ ಕಥೆಗಳುಪ್ರಿಯ ಶಬನಂ (ದೇವೇಶ ಠಾಕೂರರ ಕಾದಂಬರಿ), ನಿಲಾಲಾ (ಡಾ.ಪರಮಾನಂದ ಶ್ರೀವಾತ್ಸವರ ಕೃತಿ), ಕಲಿಕತೆ ವಯಾ ಬೈಪಾಸ್ (ಅಲಕಾ ಸರಾವಗಿ ಅವರ ಕಾದಂಬರಿ), ಜೈನಧರ್ಮ ಏನು ಹೇಳುತ್ತದೆ (ಆಚಾರ್ಯ ಮಹಾಶ್ರವಣರ ಪ್ರವಚನಗಳು ಸಂಗ್ರಹಾನುವಾದ), ಮೋಹನದಾಸ (ಉದಯ ಪ್ರಕಾಶರ ಕಾದಂಬರಿ) ಜಾಮಕಿದಾಸ ತೇಜುಪಾಲ ಮ್ಯಾನ್ಸನ್ (ಅಲಕಾ ಸರವಗಿ ಅವರ ಕೃತಿ), ಇಂಗ್ಲಿಷ್ ನಿಂದ ಕನ್ನಡಕ್ಕೆ : ಒಂದು ಮುರುಕು ಕುರ್ಚಿ (ಬಿ.ವಿ.ವೈಕುಂಠರಾಜು ಅವರ ಕಾದಂಬರಿ), ಕನ್ನಡದಿಂದ ಹಿಂದಿಗೆ: ಪರ್ಯಟನ (ಬಿ.ವಿ.ವೈಕುಂಠರಾಜು ಅವರ ಕಾದಂಬರಿ), ಅಂತ (ಬಿ.ವಿ.ವೈಕುಂಠರಾಜು ಅವರ ಕಾದಂಬರಿ), ಕಠಪುತಲಿ ಕಾ ವಿದ್ರೋಹ (ಪದ್ಮಪ್ರಸಾದರ ನಾಟಕ), ಆಜ ಕಿ ಕನ್ನಡ ಕವಿತಾಯಂ (32 ಕವಿತೆಗಳ ಅನುವಾದ)
ಪ್ರಶಸ್ತಿ-ಗೌರವ: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ (2017) ಚಾವುಂಡರಾಯ ಪ್ರಶಸ್ತಿ, ದಕ್ಷಿಣ ಭಾರತ ಜೈನ ಮಹಾಸಭೆಯ ಬಾಹುಬಲಿ ಸಾಹಿತ್ಯ ಪ್ರಶಸ್ತಿ, ದೆಹಲಿಯ ಭಾರತೀಯ ಅನುವಾದ ಪರಿಷತ್ತಿನ ಅನುವಾದ ಶ್ರೀ ಪ್ರಶಸ್ತಿ, ವಿವಿಧ ಜೈನ ಮಠಗಳ ಸದಸ್ಯರು.
ಇವರ ಜ್ವಾಲಾಮುಖಿ ಪರ್ವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. ಇವರ ಜೀವಮಾನದ ಅನುವಾದ ಕಾರ್ಯಕ್ಕೆ ಕರ್ನಾಟಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಮತ್ತು ಇವರ ಅನುವಾದಿತ ದಿ.ಬಸವರಾಜ ಕಟ್ಟೀಮನಿ ಅವರ "ಜ್ವಾಲಾಮುಖಿ ಪರ್" ಕಾದಂಬರಿಗೆ ೨೦೨೧ ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ದೊರೆತಿದೆ. ಇವರ ಅನುವಾದಿತ ಪುಸ್ತಕಗಳು ಹಿಂದಿ ಪ್ರದೇಶದಲ್ಲಿ ಚರ್ಚಿಸಲ್ಪಟ್ಟು ಹೆಸರು ಮಾಡಿವೆ.