ಲೇಖಕ ಡಿ.ಎಂ. ನದಾಫ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾತೋಳಿ ಗ್ರಾಮದವರು. ಎಂ.ಎ, ಬಿ.ಇಡಿ ಪದವೀಧರರು. ಭಾರತ ಜ್ಞಾನ-ವಿಜ್ಞಾನ ಸಮಿತಿಯ ಗುಲಬರ್ಗಾ ಸಮಿತಿಯ ಕಾರ್ಯಕಾರಿ ಮಂಡಳಿ ಸದಸ್ಯರು, 50ಕ್ಕೂ ಆದಿಕ ಪವಾಡ ಬಯಲು ಕಾರ್ಯಕ್ರಮಗಳ ಪ್ರದರ್ಶನ, ಸಮಿತಿಯ ‘ಚೈತ್ರದ ಚಿಗುರು’ ಶಿಬಿರದ ಸಂಚಾಲಕರು, ಉದಯೋನ್ಮುಖ ಬರಹಗಾರರ ಬಳಗದ ಸ್ಥಾಪಕ ಸದಸ್ಯರು, ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (1994-97) ತಾಲೂಕು ಪ್ರತಿನಿಧಿ, ಗುಲಬರ್ಗಾ ರಂಗ ಸಮುದಾಯ ತಂಡದ ಸದಸ್ಯ, ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ (2016 -2021) ಅಧ್ಯಕ್ಷರು ಹೀಗೆ ವಿವಿಧ ಹೊಣೆಗಾರಿಕೆಯಡಿ ಸೇವೆ ಸಲ್ಲಿಸಿದ್ದಾರೆ. ಗುಲಬರ್ಗಾ, ಬೆಂಗಳೂರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಕವಿತೆಗಳು, ಚಿಂತನೆಗಳು ಪ್ರಸಾರವಾಗಿವೆ. ಸಂಕ್ರಮಣ ಕಾವ್ಯಸ್ಪರ್ಧೆಯಲ್ಲಿ ಬಹುಮಾನ ವಿಜೇತರು. ವಿವಿಧ ವಿಚಾರ ಸಂಕಿರಣ, ಶಿಬಿರ, ಕವಿಗೋಷ್ಠಿ, ಸಮ್ಮೇಳನ ಹೀಗೆ ವಿವಿಧ ವೇದಿಕೆಯಡಿ ಸನ್ಮಾನಗಳು ಲಭಿಸಿವೆ.
ಕೃತಿಗಳು: ಪ್ರತೀಕಗಳಾಗುವುದಿಲ್ಲ, ಉದರದ ಸೊಲ್ಲು (ಕವನ ಸಂಕಲನ), ಅಫಜಲಪುರ ದರ್ಶನ (ಸ್ಥಳ ಪರಿಚಯ ಕೃತಿ) ಹಾಗೂ ಮಹಾಂತ ಜ್ಯೋತಿ, ಎರೆನಾಡ ಸಿರಿ, ಭೀಮರಥಿ (ಸ್ಮರಣ ಸಂಚಿಕೆಗಳ ಸಂಪಾದನೆ)