ತುಮಕೂರು ಜಿಲ್ಲೆ ಶಿರಾ ಸೀಮೆಯ ಕಳ್ಳಂಬೆಳ್ಳ ಅರುಂಧತಿ ಅವರ ಹುಟ್ಟೂರು. ತಂದೆ ದೊಡ್ಡಲಿಂಗಯ್ಯ, ತಾಯಿ ಸಣ್ಣಲಿಂಗಮ್ಮ, ಚಿತ್ರದುರ್ಗ, ಚಳ್ಳಕೆರೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭನ, ಬಳಿಕ ಬಿ.ಎಸ್ಸಿ ಅಧ್ಯಯನ. ನಂತರ ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವಿ. ಹಲವು ದಶಕಗಳಿಂದ ತುಮಕೂರಿನಲ್ಲಿ ವೈದ್ಯಕೀಯ ಸೇವೆ. ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಸಮತಾ ಸಂಘಟನೆ ಮಾನವ ಮಂಟಪ, ಬೋಧಿ ಮಂಡಲ ಇತ್ಯಾದಿ ಸಂಘಟನೆಗಳು ಮತ್ತು ಜನಪರ ಹೋರಾಟಗಳಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಕ್ರಿಯಾಶೀಲವಾಗಿ ಭಾಗಿ. ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಹಿತ್ಯ ವಲಯದಲ್ಲೂ ಪರಿಚಿತ.
ಸ್ವತಃ ಅಂತರ್ಜಾತಿ ವಿವಾಹವಾಗಿ, ಅಂತಹುದೇ ಹಾದಿ ಹಿಡಿದ ಇತರರಿಗೂ ಬೆಂಬಲವಾಗಿ ನಿಲ್ಲಲು ಸಮಾನ ಮನಸ್ಕರ ಜೊತೆಯಾಗಿ ತುಮಕೂರು ಜಿಲ್ಲೆಯಲ್ಲಿ ಮಾನವ ಮಂಟಪ ಸಹಕಾರಿ ಸಂಘ ಸ್ಥಾಪನೆ ಹಾಗೂ ಸಂಸ್ಥಾಪನ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ, ಅನೇಕ ಪತ್ರಿಕೆಗಳಲ್ಲಿ ಲೇಖನ ಪ್ರಕಟ.