ಲೇಖಕ ಚಿರಂಜೀವಿ ಸಿಂಘ್ ಅವರು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿಂಘ್ ಮೂಲತಃ ಪಂಜಾಬಿನವರು. ಪಂಜಾಬಿನ ರಹೋನ್ ಅವರ ಹುಟ್ಟೂರು. 1971ರಲ್ಲಿ ಕರ್ನಾಟಕದ ತರೀಕೆರೆಗೆ ಕಾರ್ಯ ನಿಮಿತ್ತ ಬಂದ ಚಿರಂಜೀವಿ ಸಿಂಘ್ ಅವರು ಆಗಿನಿಂದ ಕನ್ನಡ ಭಾಷೆಯನ್ನು ಕಲಿಯಲು ಆರಂಭಿಸಿದರು.
ಪ್ರೊಬೇಶನರ್ ಆಗಿ ಕರ್ನಾಕಟದ ಬಳ್ಳಾರಿಯಲ್ಲಿ ಕಾರ್ಯ ಆರಂಭಿಸಿದ ಸಿಂಘ್ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ದುಡಿದಿದ್ದಾರೆ. ಸಿನಿಮಾ, ಪತ್ರಿಕೆಗಳ ಮೂಲಕ ಸ್ಪಷ್ಟವಾಗಿ ಕನ್ನಡವನ್ನು ಕಲಿತ ಚಿರಂಜೀವಿ ಸಿಂಘ್ ಅವರು ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆಗಳಾದ ಲಂಕೇಶ್, ರಾಜೀವ್ ತಾರನಾಥ್, ಎಸ್.ಜಿ.ವಾಸುದೇವ್, ಗಿರೀಶ್ ಕಾರ್ನಾಡದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.