ಚನ್ನಕೇಶವ ಜಿ ಲಾಳನಕಟ್ಟೆ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಲಾಳನಕಟ್ಟೆಯವರು. ಈವರೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ್ದು ಅವುಗಳಲ್ಲಿ ಛಂದೋಬದ್ಧ ಮಾತ್ರಗಣ, ಅಂಶಗಣ ಅಕ್ಷರಗಣ ನವ್ಯ ನವೋದಯ ಸಾಹಿತ್ಯದ ಪ್ರಕಾರಗಳಾದ ಭಾವಗೀತೆಗಳು, ಷಟ್ಪದಿಗಳು, ರಗಳೆ, ಮುಕ್ತಕಗಳು, ತ್ರಿಪದಿಗಳು, ದ್ವಿಪದಿಗಳು, ಅಕ್ಕರಿಕೆ, ಸಾಂಗತ್ಯ, ಏಳೆ ಇತ್ಯಾದಿ ಕವಿತೆಗಳಿದ್ದು ಸುಮಾರು ೫೦ ಕ್ಕೂ ಹೆಚ್ಚು ಕವಿತೆಗಳು ಭಾವಗೀತೆಗಳಾಗಿ ವಿವಿಧ ಯುಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿರುತ್ತವೆ. ಮಡಿಲು ಕವನ ಸಂಕಲನವು ಬಿಡುಗಡೆಯಾಗಿದ್ದು, ಈಗಾಗಲೇ ರಾಜ್ಯಸರ್ಕಾರದ ಗ್ರಂಥಾಲಯಕ್ಕೆ ಆಯ್ಕೆಯಾಗಿದೆ. ಯುಗಾದಿ ಕವನ ಸಂಕಲನವು ಬಿಡುಗಡೆಗೆ ಸಿದ್ದವಿದೆ.