ಕವಯತ್ರಿ ಚಂದ್ರಕಲಾ ಎಂ,ಪಾಟೀಲ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಇಂಗಳಗಿ ಬಿ ಗ್ರಾಮದವರು. ಬಿ,ಎ,ಬಿ,ಇಡಿ ಪದವೀಧರರು. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದ ಸರಕಾರಿ,ಪ್ರೌಢಶಾಲೆಯಲ್ಲಿ (ಸಮಾಜವಿಜ್ಞಾನ) ಸಹ ಶಿಕ್ಷಕಿಯಾಗಿದ್ದಾರೆ. ಮಕ್ಕಳಸಾಹಿತ್ಯ ಪರಿಷತ್ತಿನ ಅಫಜಲಪುರ ತಾಲೂಕು ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಫಜಲಪುರ ತಾಲೂಕು ವಲಯದ ಮಹಿಳಾ ಪ್ರತಿನಿಧಿಯಾಗಿ. ಗೈಡ್ಸ್ ಕ್ಯಾಪ್ಟನ್ ಆಗಿ. ಶಿಕ್ಷಕಿಯರ ವೇದಿಕೆಯ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷರಾಗಿ. ಕಲಬುರಗಿ ಜಿಲ್ಲೆಯ ಬರಹಗಾರರ ಬಳಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕೃತಿಗಳು: ನಲಿ ಕಲಿ (ಕವನ ಸಂಕಲನ), ಕಿಶೋರಿಯರು ಕಲಿಕೆಯಲ್ಲಿ ಹಿಂದುಳಿಯಲು ಕಾರಣ (ಅಜೀಂ-ಪ್ರೇಮಜಿ ಅವರ ಪ್ರತಿಷ್ಠಾನವು ಈ ಕೃತಿಯನ್ನು ಪ್ರಕಟಿಸಿದೆ.)
ಪ್ರಶಸ್ತಿ-ಪುರಸ್ಕಾರಗಳು: ಉತ್ತಮ ಶಿಕ್ಷಕಿ ಪ್ರಶಸ್ತಿ, ತಾಲೂರು,ಜಿಲ್ಲಾ,ಸ್ಕೌಟ್ಸ್, ಗೈಡ್ಸ್, ಪ್ರಶಸ್ತಿ ಲಭಿಸಿವೆ.