ಸಿ.ಮ.ಗು ಎಂದೇ ಗುರುತಿಸಿಕೊಂಡಿರುವ ಗುರುಬಸವರಾಜ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಕಂದಾಯ ಇಲಾಖೆಯಬೆರಳಚ್ಚುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಹಲವು ಪತ್ರಿಕೆಗಳಿಗೆ ಬರದಿದ್ದಾರೆ. ಇಲಾಖೆಯಲ್ಲಿ ನಡೆಯುವ ಜಯಂತಿಗಳು, ಕಾರ್ಯಕ್ರಮಗಳಲ್ಲಿ ಸಮಯೋಚಿತ ಮಾಹಿತಿ ಸಂಗ್ರಹಣೆಯೊಂದಿಗೆ ಅತ್ಯುತ್ತಮವಾಗಿ ನಿರೂಪಣೆ ಮಾಡುತ್ತಾರೆ. ಜೊತೆಗೆ ‘ಶ್ರೀ ಶಿವಯೋಗಿ ಸಿದ್ದರಾಮೇಶ್ವರ’ ಎನ್ನುವ ಕಿರು ಹೊತ್ತಿಗೆ ಹೊರ ತಂದಿದ್ದಾರೆ. ಅಲ್ಲದೇ 2008ರವೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ ಹಾಗೂ ಬಳ್ಳಾರಿ ಜಿಲ್ಲಾ ಕಂದಾಯ ನೌಕರರ ಸಂಘದ ಉಪಾಧ್ಯಕ್ಷರಾಗಿ ಮತ್ತು ಸದರಿ ತಲೂಕಿನ ಅಂಗವಿಕಲ ನೌಕರರ ಸಂಘದ ಅಧ್ಯಕ್ಷರಾಗಿ ಅಂಗವಿಕಲ ನೌಕರರ ಕುಂದು ಕೊರತೆಗಳ ಬಗ್ಗೆ ಹೋರಾಟದಲ್ಲಿ ತೊಡಗಿಸಿಕೊಂಡ ಹೋರಾಟಗಾರ. ಅಲ್ಲದೇ ಸ್ವಗ್ರಾಮ ಇಟ್ಟಗಿಲ್ಲಿ ಹಲವಾರು ಸಮಾನ ಮನಸ್ಕ ಬಳಗದೊಂದಿಗೆ ಸಾಹಿತ್ಯಿಕ, ಸಾಮಾಜಿಕ, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಒಂದಾನೊಂದು ಕಾಲದಲ್ಲಿ’ ಅವರ ಚೊಚ್ಚಲ ಕವನ ಸಂಕಲನ.