ಭೀಮಾಂಬಿಕಾ ವಿ. ನೂಲ್ವಿ ಅವರು ಮೂಲತಃ ಗದಗ ಜಿಲ್ಲೆಯ (ಜನನ: 29-11-1999) ಗಜೇಂದ್ರಗಡದವರು. ತಂದೆ ವಿಜಯಕುಮಾರ ನೂಲ್ವಿ, ತಾಯಿ ಶಶಿಕಲಾ ನೂಲ್ವಿ. ಭೀಮಾಂಬಿಕಾ ಅವರು ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. .ಕಾವ್ಯಕೃಷಿಯೊಂದಿಗೆ ವಚನ ಸಾಹಿತ್ಯದೆಡೆಗೆ ಹೆಚ್ಚಿನ ಒಲವು ಇದೆ. ನಾ ಕಂಡ ಲೋಕ-ಇದು ಅವರ ಮೊದಲ ಕವನ ಸಂಕಲನ. ಚುಟುಕುಗಳು ಸೇರಿದಂತೆ ತಾವು ಕಂಡ ರೀತಿಯಲ್ಲಿಸಾಮಾಜಿಕ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿದ ವಚನಗಳು ಒಳಗೊಂಡಿವೆ. .
2018 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಕನಾ೯ಟಕ ದ್ವಿತಿಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ 'ಯುವ ಚೇತನ ಪ್ರಶಸ್ತಿ' ಹಾಗೂ 2020 ರ ಜನೆವರಿಯಲ್ಲಿ ಶಿಕಾರಿಪುರದ ಸದ್ಭಾವನ ವೇದಿಕೆ 'ಕದಂಬ ವಚನ ಚಿನ್ಮಯಿ' ಪ್ರಶಸ್ತಿ ಲಭಿಸಿದೆ.