ಕಾದಂಬರಿಗಾರ್ತಿ, ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರು ಸಂವೇದನೆಯುಳ್ಳ ಬರಹಗಾರ್ತಿಯಾಗಿದ್ದು 1964 ಮೇ 20 ಮೈಸೂರಿನಲ್ಲಿ ಜನಿಸಿದರು. ’ನಿರ್ಮಾಲ್ಯ, ಗ್ರೀಷ್ಠರಾಗ, ಶಿಶಿರದ ಹೂವು, ಕಡಲು, ದಹನ, ಮಾಂಡವಿ, ಅಭಿನೇತ್ರಿಯ ಅಂತರಂಗ, ಇರುವುದೆಲ್ಲವ ಬಿಟ್ಟು, ಮನಸುಗಳ ಮೃದಂಗ, ಒಂದು ಮಗುವಿನ ಪ್ರಕರಣ, ಶಾನುಭೋಗರ ಮಗಳು ಇತ್ಯಾದಿ 23 ಕಾದಂಬರಿಗಳನ್ನು ರಚಿಸಿದ್ದಾರೆ. ’ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಗಳು ಲಭಿಸಿವೆ.