ಬೇಡರಹಳ್ಳಿ ಪಂಪಣ್ಣ ಅವರು ಜನಿಸಿದ್ದು 1938 ಜನವರಿ 15ರಂದು ತಂದೆ ತಿಪ್ಪೆಸ್ವಾಮಿ, ತಾಯಿ ಗಂಗಮ್ಮ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಪಂಪಣ್ಣನವರು ಪ್ರವೃತ್ತಿಯಲ್ಲಿ ಲೇಖಕರಾಗಿದ್ದರು. ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು.
ಇವರು ಬರೆದ ಪ್ರಮುಖ ಕೃತಿಗಳೆಂದರೆ ಸೌರಭ, ಬಿರಿದ ಮೊಗ್ಗು, ಮಾವು ಮಲ್ಲಿಗೆ, ಪ್ರೇಮ ಪರಾಗ, ಭಾವಬಾಗಿನ, ಕಥನಕವನಗಳು ಭಾಗ- 1, 2, 3,4 (ಕವನ ಸಂಗ್ರಹಗಳು), ಉಡುಪರ ಕೃತಿ ಪರಿಚಯ (ಪರಿಚಯ) ಮುಂತಾದವು