About the Author

ಬಸ್ತಿ ಸದಾನಂದ ಪೈ ಯವರು ಉಡುಪಿ ಜಿಲ್ಲೆ ಹಿರಿಯಡ್ಕದವರು, ಸಾಗರದ ಶ್ರೀ ಗಜಾನನ ಟ್ರಾನ್ಸ್ ಪೋರ್ಟ್  ಕಂಪೆನಿಯ ಉದ್ಯೋಗದಿಂದ ನಿವೃತ್ತರಾಗಿ ಇಪ್ಪತ್ತು ವರ್ಷಗಳ ನಂತರ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ, ಈಗ ಸಾಗರವೇ ಅವರ ಕಾರ್ಯಕ್ಷೇತ್ರ. ಕರ್ನಾಟಕ ನಾಟಕ ಅಕಾಡೆಮಿ, ಭಾಗ್ಯಲಕ್ಷ್ಮಿ ಪ್ರಕಾಶನ ಮತ್ತು ಕಲಾಗಂಗೋತ್ರಿಯ ಸಹಯೋಗದೊಂದಿಗೆ ಶಾಲಾ ಅಂಗಳಕ್ಕೆ “ನೂರು ಮಕ್ಕಳ ನಾಟಕಗಳು” ಶ್ರೀ ಬಿ.ಎ. ರಾಜಾರಾಂ ರವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಅದರ ಎಂಟನೇ ಸಂಪುಟದಲ್ಲಿ ಇವರ “ಬ್ರೋಕರ್ ಭೋಜಣ್ಣ” ಎಂಬ ಒಂದು ಮಕ್ಕಳ ನಾಟಕ ಬೆಳಕು ಕಂಡಿದೆ. ರಾಜ್ಯದ ಹಲವು ವಾರಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ. ನಾಟಕ ರಚನೆ, ಕಥಾ ರಚನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ “ಕಲ್ಲು ಸಕ್ಕರೆ” ಎಂಬ ಮಂಕು ತಿಮ್ಮನ ಕಗ್ಗಕ್ಕೊಂದು ಕಥೆ ಪ್ರಕಟವಾಗಿದೆ.

 

ಬಸ್ತಿ ಸದಾನಂದ ಪೈ