ಬಸವರಾಜು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ (1964). ಚನ್ನರಾಯಪಟ್ಟಣದಲ್ಲಿಯೇ ಪದವಿ ವ್ಯಾಸಂಗ. 1985ರಲ್ಲಿ `ಲಂಕೇಶ್ ಪತ್ರಿಕೆ ಸೇರ್ಪಡೆ. 1990ರಿಂದ 2000 ವರೆಗೆ, ಪತ್ರಿಕೆಯಲ್ಲಿ ಪತ್ರಕರ್ತನಾಗಿ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಣೆ. `ಅಗ್ನಿ ವಾರಪತ್ರಿಕೆಯಲ್ಲಿ 2001ರಿಂದ 2007ರ ವರೆಗೆ 6 ವರ್ಷಗಳ ಕಾಲ ಸಹಸಂಪಾದಕನಾಗಿ; 2007ರ ಫೆಬ್ರವರಿಯಿಂದ ಸೆಪ್ಟೆಂಬರ್ವರೆಗೆ, 8 ತಿಂಗಳ ಕಾಲ ಸಂಪಾದಕನಾಗಿ ಕಾರ್ಯ ನಿರ್ವಹಣೆ. 2007 ರಿಂದ 2009ರ ವರೆಗೆ, ಎರಡು ವರ್ಷಗಳ ಕಾಲ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿ ಕಾರ್ಯ ನಿರ್ವಹಣೆ. ಕನ್ನಡದ ಸಾಂಸ್ಕೃತಿಕ ವೆಬ್ ತಾಣ ಕೆಂಡಸಂಪಿಗೆ ಡಾಟ್ ಕಾಂ-ನಲ್ಲಿ 2009ರಿಂದ 2012ರ ವರೆಗೆ ಸಹಸಂಪಾದಕನಾಗಿ ಹಾಗೂ ಟಾಕ್ ಇಂಗ್ಲಿಷ್ ವಾರಪತ್ರಿಕೆಯ ಪ್ರಧಾನ ವರದಿಗಾರನಾಗಿ, 2012 ರಿಂದ 2013ರ ಆಗಸ್ಟ್ ವರೆಗೆ ಕೆಲಸ ನಿರ್ವಹಿಸಿದ ಅನುಭವ.2014ರ ಮಾರ್ಚ್‌ನಿಂದ ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ಬೆಂಗಳೂರು ಸ್ಥಾನಿಕ ಸಂಪಾದಕನಾಗಿ ಕಾರ್ಯ ನಿರ್ವಹಣೆ. 2013ರಲ್ಲಿ ಚಿತ್ರ ನಟ ನರಸಿಂಹರಾಜು ಕುರಿತ 'ಯುಗದ ನಗು' ಕೃತಿ ಪ್ರಕಟಣೆ. 2015ರ ಕನ್ನಡ ಹಾಗೂ ಪ್ರಾದೇಶಿಕ ಚಲನಚಿತ್ರಗಳ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯನಾಗಿ; 2015ರಲ್ಲಿ ದೇವರಾಜ ಅರಸು ಹಿಂದುಳಿದ ಜಾತಿಗಳ ಅಭಿವೃದ್ಧಿ ನಿಗಮದ ವತಿಯಿಂದ ದೇವರಾಜ ಅರಸು ಪುಸ್ತಕ ಪ್ರಕಟಣೆಯ ಸಂಪಾದಕೀಯ ಮಂಡಳಿಯ ಸಂಪನ್ಮೂಲ ವ್ಯಕ್ತಿಯಾಗಿ; 2018ರ ಕಿರುಚಿತ್ರಗಳ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಣೆ.