ಹಿರಿಯ ಅನುವಾದಕರು, ಬರಹಗಾರರಾಗಿದ್ದ ಬಾಗಲೋಡಿ ದೇವರಾಯರು ಜನಿಸಿದ್ದ್‌ಉ 1927 ಫೆಬ್ರುವರಿ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಮಾಡಿಯಲ್ಲಿ ಜನಿಸಿದರು. ಮಂಗಳೂರಿನಲ್ಲಿ ಇಂಟರ್ ಮೀಡಿಯೆಟ್ ಶಿಕ್ಷಣ ಪಡೆದ ಇವರು ಬಾಲ್ಯದಲ್ಲಿಯೇ ಇಂಗ್ಲಿಷ್ ಭಾಷೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಮದ್ರಾಸು ವಿಶ್ವವಿದ್ಯಾಲಯದಿಂದ ಪದವಿ ಪಡೆದ ಇವರು ಅದೇ ಕಾಲೇಜಿನಲ್ಲಿ ಟ್ಯೂಟರ್ ಆಗಿ ವೃತ್ತಿ ಆರಂಭಿಸಿದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ವಿದೇಶಾಂಗ ವ್ಯವಹಾರ ಇಲಾಖೆಯಲ್ಲಿ ರಾಜತಾಂತ್ರಿಕ ವೃತ್ತಿ ನಡೆಸಿ ನಿವೃತ್ತರಾಗಿದ್ದರು. ಶುದ್ಧ ಫಟಿಂಗ, ಬಾಗಲೋಡಿ ದೇವರಾಯರ ಆಯ್ದ ಕತೆಗಳು, ಹುಚ್ಚು ಮುನಸೀಫ, ಆರಾಧನಾ, ಬಾಗಲೋಡಿ ದೇವರಾಯರ ಸಮಗ್ರ ಕಥೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರು 1985 ಜುಲೈ 25ರಂದು ನಿಧನರಾದರು.