ಬಸವರಾಜ ಗಿರಿಮಲ್ಲಪ್ಪ ಯಲ್ಲಟ್ಟಿಯವರು ಬ.ಗಿ.ಯಲ್ಲಟ್ಟಿ ಎಂದೇ ಖ್ಯಾತನಾಮರು. ಅವರು ಮೂಲತಃ ಬನಹಟ್ಟಿಯವರು. ತಂದೆ ಗಿರಿಮಲ್ಲಪ್ಪ,ತಾಯಿ ವೀರ ಸಂಗವ್ವ. ಬನಹಟ್ಟಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡ ಅವರು ಸಾಂಗ್ಲಿಯ ವೆಲಿಂಗ್ಟನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ನಂತರ ರಬಕವಿಯ ಪ್ರೌಢಶಾಲೆಯಲ್ಲೂ, ಶ್ರೀ ಶರಣಬಸವೇಶ್ವರ ಆರ್ಟ್ಸ್ ಕಾಲೇಜಿನಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.