About the Author

ಬರಹಗಾರ್ತಿ ಸುವರ್ಣ ಬಿ. ಜೆ. ಅವರು 1954 ಅಕ್ಟೋಬರ್‌ 06 ರಂದು ಜನಿಸಿದರು. ’ಡಾಕ್ಟರ್ ಕರೇನ್ ಹಾರ್ನಿ(ಸಂಪಾದನೆ), ಕರ್ನಾಟಕದ ಮಹಿಳೆಯರು ಸಂಪುಟ-೧ ಲೇಖಕಿಯರು, ಕರ್ನಾಟಕ ಮಹಿಳೆಯರು ಸಂ. ಆಧುನಿಕ ಕನ್ನಡ ಲೇಖಕಿಯರು, (ಪರಿಷ್ಕತ, ವಿಸ್ತ್ರತ ಆವೃತ್ತಿ), ಚಿ.ನ.ಮಂಗಳ ಬದುಕು ಬರಹ (ಅನನ್ಯ ಚೇತನಮಾಲಿಕೆ) ಹೊರತಂದಿದ್ದಾರೆ. ಐ.ಎಸ್.ಜೋಹರ್ ಅವರ ಇಂಗ್ಲಿಷ್ ನಾಟಕ ಭುಟ್ಟೋ ಅನುವಾದಿಸಿದ್ದಾರೆ. ಮನಃಶಾಸ್ತ್ರ ಮತ್ತು ಸಹಜಯೋಗ ಕುರಿತು ರಾಜ್ಯ, ರಾಷ್ಟ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ನಾಟಕ ನಿರ್ದೇಶನ ಅಭಿನಯಗಳಲ್ಲಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಿ. ಜೆ. ಸುವರ್ಣ

(06 Oct 1954)