ಲೇಖಕಿ ಕುಸುಮ ಬಿ. ಜೆ. ಗೃಹವಿಜ್ಞಾನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ತಂದೆ ಬಿ.ಎಸ್. ಗೋಪಾಲರಾವ್, ತಾಯಿ ವೇದಾವತಿಬಾಯಿ. ’ವಿಜ್ಞಾನ ವಿಹಾರ, ತಮಾಷೆ ತಲೆ’ ಅವರ ಪ್ರಮುಖ ಕೃತಿಗಳು. ಬೋಧನೆಯಲ್ಲಿ ಹೊಸ ಅವಿಷ್ಕಾರಗಳಿಗಾಗಿ ಎನ್.ಸಿ.ಇ.ಆರ್.ಟಿ. ಪ್ರಶಸ್ತಿ, ಶಾಶ್ವತಿಯಿಂದ ಗಾರ್ಗಿ ಪ್ರಶಸ್ತಿ, ಜ್ಯೋತಿ ಪ್ರಶಸ್ತಿ (ಶಿಕ್ಷಣದ ಮೂಲಕ ಸಮಾಜ ಸೇವೆಗಾಗಿ) ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.