ಆಶ್ರಿತಾ ಕಿರಣ್ ಅವರು ಉಡುಪಿ ಜಿಲ್ಲೆಯ ಸಿದ್ದಾಪುರದವರು. ತಂದೆ ಟಿ ಗುರುಮೂರ್ತಿ ರಾವ್ ಮತ್ತು ತಾಯಿ ಗೀತಾ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಂದಾಪುರದಲ್ಲಿ ಮುಗಿಸಿ ಡಿಗ್ರಿ ಪದವಿಯನ್ನು ಕಾರ್ಕಳ ಕಾಲೇಜಿನಲ್ಲಿ ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ನಲ್ಲಿ ಎಂ ಎ ಪದವಿಯನ್ನು ಪಡೆದು ಎರಡು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ನ ಅನೇಕ ಸಾಹಿತ್ಯ ಗುಂಪುಗಳಲ್ಲಿ ದಿನಪತ್ರಿಕೆಗಳಲ್ಲಿ ಲೇಖನ ಬರೆಯುತ್ತಿದ್ದಾರೆ. ಹಾಡು ಕೇಳುವುದು ದೇವರ ನಾಮವನ್ನು ಹಾಡುವುದು, ಪುಸ್ತಕಗಳನ್ನು ಓದುವುದು ಆಶ್ರಿತಾ ಅವರ ಹವ್ಯಾಸಗಳು. ‘ಕಥಾಪಂಜರʼ ಎಂಬ ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿದ್ದಾರೆ.