ಆಶಿಕ್ ಮಂಗಳೂರಿನ ಮುಲ್ಕಿಯ ಹುಡುಗ. ಮಾತೃ ಭಾಷೆ ಮಲಾಯಳಂ. ಆದರೆ ಬೆಳೆದಿದ್ದೆಲ್ಲಾ ಕಡಲ ನಗರ ಮಂಗಳೂರಿನಲ್ಲಿ. ಹೀಗಾಗಿ ಕನ್ನಡ ಅವನ ಭಾಷೆ. ಕೆನಡಾ ಖ್ಯಾತ ಬರಹಗಾರ್ತಿ ಹನ್ನಾ ರಿಷೆಲ್ ಹೇಳಿದ ಹಾಗೆ ತುಂಬಾ ಓದಬೇಕು, ತುಂಬಾ ಬರೆಯಬೇಕು, ಕೊನೆಗೆ ಎಲ್ಲವನ್ನೂ ಮರೆಯಬೇಕು. ಅಂತೆಯೇ ಸಾಧ್ಯವಾದಷ್ಟು ಓದುತ್ತೇನೆ, ಸಾಧ್ಯವಾದಷ್ಟು ಬರೆಯುತ್ತೇನೆ, ಕೊನೆಗೆ ಎಲ್ಲವನ್ನೂ ಮರೆತು ಬಿಡುತ್ತೇನೆ. ಮತ್ತೆ ಹೊಸ ಓದಿಗೆ ತೆರದುಕೊಳ್ಳುತ್ತೇನೆ, ಹೊಸದಾಗಿ ಏನಾದರು ಗೀಚುತ್ತೇನೆ ಎನ್ನುವ ಹುಡುಗ ಆಶಿಕ್. ಹೀಗೆ ಕನ್ನಡದಲ್ಲಿ ಓದುವುದು ಬರೆಯುವುದು ಅವನ ಹವ್ಯಾಸ. ಹುಟ್ಟಿದ್ದು 1995, ಫ್ರೆಬ್ರವರಿ 1ರಂದು. ಸುರತ್ಕಲ್‍ನ ಗೋಂವಿದಾಸ ಕಾಲೇಜಿನಲ್ಲಿ ಜರ್ನಲಿಸಂ ಪದವಿ ಪಡೆದಿರುವ ಆಶಿಕ್ (ಬಿ.ಎ). ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮ ಮುಗಿಸಿದ್ದಾರೆ, ಸದ್ಯಕ್ಕೆ ಪತ್ರಕರ್ತನಾಗಿ ಕಾರ್ಯನಿರ್ವೈಸುತ್ತಿದ್ದಾರೆ. ಸುಮಾರು 4 ವರ್ಷದಿಂದ ಕನ್ನಡ ಪತ್ರಿಕೋದ್ಯಮದಲ್ಲಿರುವ ಆಶಿಕ್ ಸಮಯ ಟಿವಿ, ರಾಜ್ ನ್ಯೂಸ್, ಸುದ್ದಿ ಟಿವಿ ಈಗ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಿವಿಧ ನ್ಯೂಸ್ ವೆಬ್‍ಗಳಿಗೆ ಹಾಗೂ ಪತ್ರಿಕೆಗಳಿಗೆ ಕವನ ಹಾಗೂ ಲೇಖನವನ್ನೂ ಬರೆಯುತ್ತಾರೆ.