ಅರ್ಚಿತ್.ಎ. ಜೈನ್ ಅವರು ಮೂಲತಃ ಮಲೆನಾಡಿನವರು. ತಂದೆ ಅರವಿಂದ್ ತಾಯಿ ಸರಳ. ಪ್ರಸ್ತುತವಾಗಿ ಮಂಗಳೂರಿನ ಎಸ್.ಡಿ. ಎಂ ಕಾಲೇಜ್ ನಲ್ಲಿ ದ್ವಿತೀಯ ಬಿ.ಬಿ.ಎ. ಡಿಗ್ರಿ ವ್ಯಾಸಂಗ ಮಾಡುತಿದ್ದಾರೆ. ಕವನ, ಕವಿತೆ, ಪ್ರೇಮ ಕವಿತೆ ಸಣ್ಣ ಕಥೆ, ಲೇಖನ ಸೇರಿದಂತೆ ಇನ್ನಿತರ ಬರವಣಿಗೆಯನ್ನು ಹತ್ತನೇ ತರಗತಿಯಿಂದ ಆರಂಭಿಸಿದರು. ಅಂತರ್ ಕಾಲೇಜ್ ಮಟ್ಟದ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ ಕಾಲೇಜ್ ಕಾಲೇಜ್ ಮಟ್ಟದಲ್ಲಿ ಕವನ ರಚನೆ, ಪುಸ್ತಕ ವಿಮರ್ಶೆ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ಧಾರೆ. ಬರವಣಿಗೆ ಮಾತ್ರವಲ್ಲದೆ ನಿರೂಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜನೆ ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳು ಅವರ ಹವ್ಯಾಸವಾಗಿದೆ. ‘ಭಾವನೆಗಳ ಬಯಲಿನಲ್ಲಿ’ ಅವರ ಮೊದಲ ಕವನ ಸಂಕಲನವಾಗಿದೆ. ಇದರಲ್ಲಿ 100 ಕ್ಕೂ ಹೆಚ್ಚು ಕವನಗಳು ಒಳಗೊಂಡಿದೆ.
ಪ್ರಶಸ್ತಿಗಳು: ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ .