ಅಮೆರಿಕಾದ ಶಿಕಾಗೋ ನಗರದಲ್ಲಿ ನೆಲಸಿರುವ ಅನುಪಮಾ ಮಂಗಳವೇಡೆ, ವೃತ್ತಿಯಲ್ಲಿ ಇಂಜಿನಿಯರ್. ಸಂಗೀತ, ನೃತ್ಯ ಹಾಗೂ ಅಭಿನಯದಲ್ಲಿ ವಿಶೇಷ ಆಸಕ್ತಿ. ಭರತನಾಟ್ಯ ನೃತ್ಯಗಾರ್ತಿಯು ಹೌದು. ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರಾಗಿದ್ದು, 'ಡಿಂಡಿಮ' ಎಂಬ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದ ಕೆಲವು ಕವನ, ಕಥೆ ಮತ್ತು ಪ್ರಬಂಧಗಳು ’ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟವಾಗಿವೆ.