ಸ್ಪಂದನೀಯ ಕಥೆಗಾರ, ಕವಿ ಅಮರೇಶ ಗಿಣಿವಾರ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣಿವಾರ ಎಂಬ ಗ್ರಾಮದಲ್ಲಿ 1989 ಜೂನ್ 01 ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ "ಬಯಲು" 2009 ರಲ್ಲಿ ಪ್ರಕಟಣೆ ಕಂಡಿದ್ದು ಮೊಟ್ಟಮೊದಲ ರಾಜ್ಯ ಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ಹಾಗೂ "ಹಿಂಡೆಕುಳ್ಳು" ಕಥೆಗೆ ಸಂಗಾತ ಬಹುಮಾನಗಳು ಲಭಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯ ಶಿಕ್ಷಣ ಪದವಿ ಪಡೆದಿದ್ದಾರೆ. 2008ರಲ್ಲಿ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕನಾಗಿ ನೇಮಕಗೊಂಡು ಪ್ರಸ್ತುತ ತುರುವಿಹಾಳ ಅಂಚೆ ಕಛೇರಿಯಲಿ ಉಪ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮ್ತತಿತರ ಕತೆ ಮತ್ತು ಕವನ ವಿಮರ್ಶೆ, ಪ್ರಬಂಧ, ಲೇಖನಗಳು ರಾಯಚೂರಿನ ಆಕಾಶವಾಣಿಯಲ್ಲಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ರಾಯಚೂರು ವಾಣಿ, ಸುದ್ದಿಮೂಲ, ರಾಯಚೂರ ಸುದ್ದಿಬಿಂಬ, ಅವಧಿ ಇ-ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿವೆ.