ಕವಿ ಅಲಿಬಾಬಾ ರವುಡಕುಂದಾ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರವುಡಕುಂದಾ (01-06-1982) ಗ್ರಾಮದವರು. ತಂದೆ- ಶ್ಯಾಮಿದ್ ಸಾಬ. ಇವರದು ಕೃಷಿಕ ಕುಟುಂಬ. ವಿದ್ಯಾರ್ಥಿ ದೆಸೆಯಿಂದಲೇ ತಮ್ಮೊಳಗೆ ಕ್ರಿಯಾಶೀಲತೆ ರೂಢಿಸಿಕೊಂಡವರು. ಕತೆ, ಕವನ, ಲೇಖನಗಳನ್ನು ಬರೆಯುವುದು, ಧಾರ್ಮಿಕ ಪ್ರವಚನ ನೀಡುವುದು ಹವ್ಯಾಸ. ರವುಡಕುಂದಾದಲ್ಲಿ ಪ್ರಾಥಮಿಕ ಶಿಕ್ಷಣ, ಕುಷ್ಟಗಿ ತಾಲೂಕಿನ ತಾವರೆಗೇರಾದಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ, ಸಿಂಧನೂರಿನಲ್ಲಿ ಟಿಸಿಎಚ್ ಶಿಕ್ಷಣ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ(ಹಿಂದಿ) ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಇತಿಹಾಸ) ಸ್ನಾತಕೋತ್ತರ ಪದವೀಧರರು. 29 ಜನವರಿ 2004 ರಿಂದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಪ್ರಸ್ತುತ ರವುಡಕುಂದಾ ಸರಕಾರಿ ಪ್ರೌಢಶಾಲೆಯಲ್ಲಿ ಬಡ್ತಿ ಪಡೆದು ಸಹ ಶಿಕ್ಷಕರು. , ‘ನಾನು ಹೀಗೆಯೇ ಪಯಣ ಮುಗಿಸಿ ಹೋಗಲೇ’ ಎಂಬುದು ಅವರ ಚೊಚ್ಚಲ ಕವನ ಸಂಕಲನ.