ಆಚಾರ್ಯ ಕುಮಠಾ ನಾರಾಯಣ ಅವರ ಮೂಲ ಹೆಸರು ಗಣಪಯ್ಯ ನಾರಾಯಣ ಪೈ. 1921 ಆಗಸ್ಟ್ 8 ರಂದು ಜನನ. ವ್ಯಾಕರಣ, ಅಲಂಕಾರ, ಜ್ಯೋತಿಷ್ಯಗಳಲ್ಲಿ ಪರಿಣಿತ, ಗ್ರಂಥ ಸಂಶೋಧಕರಾಗಿದ್ದರು. ನಿಪ್ಪಣಿಯ ,ಮೂಡಕಟ್ಟೆ ರಾಘವೇಂದ್ರರಾಯರ ಕನ್ನಡ ಜ್ಞಾನೇಶ್ವರೀ ಗ್ರಂಥ ಪರಿಶೋಧಕರಾಗಿದ್ದರು. 1942 ಸಪ್ಟೆಂಬರ್ 5ರಂದು ಮರಣ ಹೊಂದಿದರು.
ಕೃತಿಗಳು : ಶ್ರೀ ಗಯಾಕ್ಷೇತ್ರ ಮಹಾತ್ಮ್ಯವು ಎಂಬ ದಕ್ಷಿಣಕಾಶಿ ಉಪ್ಪಿನಂಗಡಿ ಕುಮಾರಧಾರಾ ನೇತ್ರಾವತೀ ಸಂಗಮಸ್ಥಳ ಮಹಾತ್ಮ್ಯವು (ಅನುವಾದಿತ), ಸುನೀತಿ ಭಾಗವತ