ಆತ್ಮಾರಾಮಶಾಸ್ತ್ರಿ ನಾಗೇಂದ್ರ ಶಾಸ್ತ್ರಿ ಓಡ್ಲಮನೆ ಅವರು (ಜನನ: 1881 ರಲ್ಲಿ) ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಓಡ್ಲಮನೆಯವರು. ವ್ಯಾಕರಣ, ಅಲಂಕಾರ ಶಾಸ್ತ್ರ ಪರಿಣಿತರು. 1912 ರಲ್ಲಿ ಮಂಗಳೂರು ಬಾಸೆಲ್ ಮಿಶನ್ ಹೈಸ್ಕೂಲ್ ನಲ್ಲಿ ಸಂಸ್ಕೃತ ಪಂಡಿತರಾಗಿದ್ದರು. 1926 ರಿಂದ ಮಡಿಕೇರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಸೇವೆ ಮಾಡಿ ನಿವೃತ್ತರಾದರು. ’ಧರ್ಮನಿತ್ಯೋರೇಕವಾಕ್ಯತಾ’ ಲೇಖನಕ್ಕೆ ಕಲಕತ್ತೆಯ ನಿಖಿಲ ಭಾರತ ಸಾಹಿತ್ಯ ಸಂಘದಿಂದ ’ವಿದ್ಯಾವಾಚಸ್ಪತಿ’ ಪ್ರಶಸ್ತಿ ದೊರಕಿದೆ.
ಕೃತಿಗಳು: ಕೇತುಭಂಗ, ನಾಟಕ ಕಲೆ, ಶ್ರೀಕೃಷ್ಣಚರಿತಾಮೃತಂ, ಸನಾತನ ಧರ್ಮ, ಸಂಕ್ಷೇಪಾ ಗೀತಾ, ಹಿಂದುವ್ರತ ವಿವೇಕ.