ಕಾದಂಬರಿಗಾರ್ತಿ ಆನೇಕಲ್ ಶಾರದಾ ಅವರು ನಿವೃತ್ತ ಶಿಕ್ಷಕರು. ಅವರು 1938 ಏಪ್ರಿಲ್ 01ರಂದು ಆನೇಕಲ್‌ನಲ್ಲಿ ಜನಿಸಿದರು. ತಂದೆ ಎಂ.ಎಸ್. ಸುಬ್ರಹ್ಮಣ್ಯ, ತಾಯಿ ಸೀತಮ್ಮ. ’ಸಾಕುಮಗ, ದೇವಾಲಯ, ಒಡೆದ ಹಾಲು, ಯಾರದ್ದು ಯಾರಿಗೆ, ವಕೀಲ್ ವೈದೇಹಿ 1ನೇ ಭಾಗ, ವಕೀಲ್ ವೈದೇಹಿ ಭಾಗ-2, ಮಿಸ್ ಮಾಲಾ’ ಅವರ ಪ್ರಮುಖ ಕಾದಂಬರಿಗಳು.