About the Author

ಹಿರಿಯ ಲೇಖಕ ಆನಂದರಾವ್ ಬೈಂದೂರ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. 1879 ಜನವರಿ 22 ರಂದು ಜನಿಸಿದರು. ಮದ್ರಾಸಿನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸುವ ಆನಂದರಾವ್ ಬಿ.ಎ, ಬಿ.ಎಲ್ ಪದವೀಧರರು. ಮಂಗಳೂರಿನಲ್ಲಿ ವಕೀಲರಾಗಿದ್ದರು. ಜಮೀನುದಾರರು ಹೌದು. ಸುಮಾರು 80 ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದರು.

ಕೃತಿಗಳು: ಗೃಹಶಿಲೆ(1911), ಚಿತ್ರಶಿಖಂಡಿ(1923), ನೂರಜಹಾನ(1923), ಪುತ್ತೂರು(1931), ಸಹಕಾರ(1921), ಸೌಭಾಗ್ಯ ಸೋಪಾನ(1926), ಶ್ರೀಚಿತ್ರಾಪುರ ಚರಿತ್ರ( 1946).

ಆನಂದರಾವ್ ಬೈಂದೂರ

(22 Jan 1879)