ಲೇಖಕ ಆದೆಪ್ಪ ಹೆಂಬಾ ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದವರು. ಹುಟ್ಟೂರಿನಲ್ಲಿ ಪ್ರೌಢಶಾಲೆ ಶಿಕ್ಷಣ, ನಂತರ ಧಾರವಾಡದಲ್ಲಿ ಪಿಯುಸಿ ಹಾಗೂ ಬಿ.ಎಸ್.ಸಿ. ಪದವಿ, ಬಿಎಡ್ ವ್ಯಾಸಂಗವನ್ನು ಧಾರವಾಡದ ಯುನಿವರ್ಸಿಟಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. 1994 ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ನಂತರ 2015 ರಲ್ಲಿ ಬಡ್ತಿ ಹೊಂದಿ ಸದ್ಯ, ಮಸ್ಕಿ ತಾಲೂಕಿನ ಉದ್ದಾಳ ಗ್ರಾಮದ ಸರಕಾರಿ ಪ್ರೌಢಶಾಲೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ, ಕವನ, ಕಾದಂಬರಿ, ಜೀವನ ಚರಿತ್ರೆ ರಚನೆ ಇವರ ಹವ್ಯಾಸ.