ಪ್ರಾಚ್ಯವಿದ್ಯೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಕೃತ ಮತ್ತು ಜೈನಶಾಸ್ತ್ರ ಪೀಠದ ಪ್ರಥಮ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಉಪಾಧ್ಯೆಯವರು ಹುಟ್ಟಿದ್ದು 1906 ಫೆಬ್ರವರಿ 06 ಬೆಳಗಾಂ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಎಂಬ ಹಳ್ಳಿಯಲ್ಲಿ. ಪುಣೆಯ ಸಂಸ್ಕತ ಕೋಶ ಮತ್ತು ಪರಿಷತ್ತಿನ ಕನ್ನಡ ನಿಘಂಟುವಿನ ಸಂಪಾದಕ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದರು. 1941 ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದ ಪ್ರಾಕೃತ-ಪಾಲಿ ವಿಭಾಗದ ಅಧ್ಯಕ್ಷತೆ, 1966 ಅಲಿಘಡದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದ ಸರ್ವಾಧ್ಯಕ್ಷತೆ 1939ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ 'ಪರಮಾತ್ಯ ಪ್ರಕಾಶ', ‘ವರಾಂಗ ಚರಿತೆ' ಗ್ರಂಥಗಳ ಶೋಧನೆ, ಪಾಂಡಿತ್ಯಕ್ಕೆ ಡಾಕ್ಟರೇಟ್ ಪಡೆದರು.
'ಪಂಚಸುತ್ತಂ' ಅವರ ಪ್ರಥಮ ಕೃತಿ, 'ದೇಶೀಕೋಶದಲ್ಲಿನ ಕನ್ನಡ ಪದಗಳು', 'ಕವಿ ಪರಮೇಶ್ವರ', 'ಪರಮಾತ್ಯ ಪ್ರಕಾಶ', 'ವರಾಂಗ ಚರಿತೆ', 'ಕಂಸ ವಧೆ', 'ಬೃಹತ್ ಕಥಾಕೋಶ', 'ಸಂಸ್ಕೃತ ಗ್ರಂಥಗಳು', 'ಸ್ವರೂಪ ಸಂಬೋಧನ ಪಂಚವಿಂಶತಿ', 'ತಿಲುವಯ್ಯ ಪಣ್ಣತಿ', 'ಕುವಲಯ ಮಾಲ ಆತ್ಮಾನುಶಾಸನ', ’ಸಿದ್ಧಸೇನಾ ದಿವಾಕರನ ನ್ಯಾಯಾವತಾರ' ಅವರ ಪ್ರಮುಖ ಕೃತಿಗಳು. ಕೊಲ್ಲಾಪುರ ತಲುಪುವ ಮಾರ್ಗ ಮಧ್ಯೆ ಕಾಣಿಸಿಕೊಂಡ ಎದೆನೋವಿನಲ್ಲಿ 08 ಅಕ್ಟೋಬರ್ 1975ರಂದು ಆಸ್ಪತ್ರೆಯಲ್ಲಿ ಅಸುನೀಗಿದರು.