About the Author

ಲೇಖಕ ಎ. ಶಿವರಾಜು ಅವರು ಚಾಮರಾಜನಗರ ಬಳಿಯ ಬೂದಿತಿಟ್ಟು ಪ್ರದೇಶದವರು. ತಂದೆ ಅಂಕಯ್ಯ, ತಾಯಿ ಪುಟ್ಟಮ್ಮ. ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ, ರಾಮಸಮುದ್ರದಲ್ಲಿ ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪೂರೈಸಿದರು.  ಮೈಸೂರು ವಿ.ವಿ.ಯಿಂದ ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಭರತೀಯ ಸಾಹಿತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಸದ್ಯ ಸಂಶೋಧನಾ ವಿದ್ಯಾರ್ಥಿ. ಕ್ಷೇತ್ರ ಕಾರ್ಯದಲ್ಲಿ ದೊರೆತ ಮಾಹಿತಿ ಆಧರಿಸಿ ಬರೆದ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.

ಕೃತಿಗಳು: ಜಾನಪದ ವೈಭವ (ಸಂಶೋಧನಾತ್ಮಕ ಲೇಖನಗಳು)

ಎ. ಶಿವರಾಜು