ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಅನಂತ ಕೃಷ್ಣ ಶಾಸ್ತ್ರಿಗಳು (ಜನನ: 1940ರ ಮಾರ್ಚ್ 17), ತಂದೆ ಕೃಷ್ಣ ಶಾಸ್ತ್ರಿ, ತಾಯಿ ಭವಾನಿ. ಆರಂಭಿಕ ಶಿಕ್ಷಣವನ್ನು ಶಿರಸಿಯಲ್ಲೇ ಪಡೆದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಾಲೇಜು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಹೆಸರು ಗಳಿಸಿದರು. ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (ಇತಿಹಾಸ) ಎಂ.ಎ. ಪದವೀಧರರು. ಅನಂತ ಕೃಷ್ಣಶಾಸ್ತ್ರಿಗಳು ವೃತ್ತಿ ಪ್ರಾರಂಭಿಸಿದ್ದು ಬೀದರಿನಲ್ಲಿ(1963). ಮುಂದೆ ಶಿರಸಿಯ ಕಾಲೇಜಿನಲ್ಲಿಯೇ ಇತಿಹಾಸ ಅಧ್ಯಾಪಕರಾದರು. ಜಾಗತಿಕ ಇತಿಹಾಸ ಅಧ್ಯಯನ ಡಾ. ಎ.ಕೆ.ಶಾಸ್ತ್ರಿಯವರ ಪ್ರಮುಖ ಆಸಕ್ತಿ.
‘ಫ್ರಾನ್ಸ್ ದೇಶದ ಮಹಾಕ್ರಾಂತಿ’ (1971) ಎಂಬುದು ಇವರ ಮೊದಲ ಗ್ರಂಥ. ಶೃಂಗೇರಿಯ ಕಡತಗಳ ಆಳವಾದ ಅಧ್ಯಯನ ಮಾಡಿ, ‘ಶೃಂಗೇರಿಯ ಇತಿಹಾಸ’, `Contents of the Kadata’s of the Shringeri Math( 1974), A History of Shringeri(1982), Selection from the Kadata’s of the Shringerimath(1982), ಶೃಂಗೇರಿ ಧರ್ಮಸಂಸ್ಥಾನ(1983), The records of the Shringerimath Relating to Keladi(1992), A catalogue of the records in the Shringerimath (ಎರಡು ಸಂಪುಟಗಳು 1995,1996) , ‘ಸ್ವರ್ಣವಲ್ಲೀ ಮಹಾಸಂಸ್ಥಾನದ ಐತಿಹಾಸಿಕ ದಾಖಲೆಗಳು’ (1997) ‘ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ’(1997), ಶಿರಸಿ ತಾಲ್ಲೂಕಿನ ಇತಿಹಾಸ’(1988), ಮಂಜುಗುಣಿ ಕ್ಷೇತ್ರದ ಚಾರಿತ್ರಿಕ ದಾಖಲೆಗಳು(1997), 22 ಕವಿತೆಗಳ ಸಂಗ್ರಹ ‘ಉಪಖ್ಯಾನ’(1982), 40 ಕವನಗಳ ಸಂಗ್ರಹ ‘ಅನಿಸಿಕೆಗಳು’ (1993). ಪ್ರಮುಖ ಕೃತಿಗಳು. ಶಿರಸಿಯ ಸ್ವಗೃಹದಲ್ಲಿ 2020ರ ಜನವರಿ 4ರಂದು ಹೃದಯಾಘಾತದಿಂದ ಮೃತಪಟ್ಟಾಗ ಅವರಿಗೆ 80ವರ್ಷ ವಯಸ್ಸಾಗಿತ್ತು.