ಡಾ. ಎ. ಜಯಕುಮಾರ ಶೆಟ್ಟಿ ಅವರು ಮಂಗಳೂರು ವಿ.ವಿ.ಯಿಂದ ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರರು. 1985ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ವೃತ್ತಿಬದುಕು ಆರಂಭಿಸಿ, ಸಿಬ್ಬಂದಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ, ಎಂ.ಬಿ.ಎ ಹಾಗೂ ಕರ್ನಾಟಕ ವಿ.ವಿ.ಯಿಂದ (1998) ಡಾಕ್ಟರೇಟ್ ಪದವಿ ಪಡೆದರು. ಪ್ರಸಕ್ತ ತುಮಕೂರು ವಿ.ವಿ. ಹಾಗೂ ಕನ್ನಡ ವಿ.ವಿ. ಅಭಿವೃದ್ಧಿ ಆಧ್ಯಯನ ವಿಭಾಗದ ಸಂಶೋಧನಾ ಮಾರ್ಗದರ್ಶಕರು. ಮಂಗಳೂರು ವಿ.ವಿ. ಗ್ರಾಮೀಣಾಭಿವೃದ್ಧಿ ಹಾಗೂ ವ್ಯವಹಾರ ನಿರ್ವಹಣಾ ಅಧ್ಯಯನ ಮಂಡಳಿಯ ಅಧ್ಯಕ್ಷರು ಹಾಗೂ ಮಂಗಳೂರು ವಿ.ವಿ. ಅರ್ಥಶಾಸ್ತ್ರ ಒಕ್ಕೂಟದ ರಾಜ್ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ರಾಜ್ಯ ಪ್ರಶಸ್ತಿ, ಬೇಳ್ತಂಗಡಿ ರೋಟರಿ ಸಂಸ್ಥೆಯ ಅಧ್ಯಕ್ಷರು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ರೋಟರಿ ಅಧ್ಯಕ್ಷರಾಗಿಯೂ ಸ್ಥಾನ ಪಡೆದಿದ್ದಾರೆ.
ಕೃತಿಗಳು: ಅಭಿವೃದ್ಧಿ ಅರ್ಥಶಾಸ್ತ್ರ, ಅಂತರರಾಷ್ಟ್ರೀಯ ವ್ಯಾಪಾರ, ಸೇರ್ಪಡೆಯುಳ್ಳ ಅಭಿವೃದ್ಧಿ, ಹಕ್ಕುಗಳ ಪರಿಭಾಷೆಯಲ್ಲಿ ಅಭಿವೃದ್ಧಿ. (ಸಂಪಾದನೆಗಳು) ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 30 ಪ್ರಬಂಧಗಳು ಪ್ರಕಟವಾಗಿದ್ದು, 50ಕ್ಕೂ ಅಧಿಕ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು 3 ವಿಷಯಗಳ ಮೇಲೆ ಪ್ರಾಯೋಜಿತ ಕಿರು ಸಂಶೋಧನಾ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿದ್ದಾರೆ.