ವಿರಾಜಕುಮಾರ ವಿ ಕಲ್ಯಾಣ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಊರಿನಲ್ಲಿ ಮುಗಿಸಿ ಕಲಬುರಗಿಯಲ್ಲಿ ಪಿಯುಸಿ ನಂತರ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಕೋರ್ಸ್ ಪೂರ್ಣಗೊಳಿಸಿದರು. ಕರುನಾಡು ಶ್ರೀಗಂಧ-ಎಂಬುದು ಇವರ ಮೊದಲ ಕವನ ಸಂಕಲನ. ವಿವಿಧ ಸಂಘ-ಸಂಸ್ಥೆಗಳಿಂದ ಗೌರವ-ಸನ್ಮಾನಗಳು ಲಭಿಸಿವೆ.