ವಿಜಯಾ ಶ್ರೀಧರ ಅವರು ಗಣಿತ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಉತ್ತರ ಕನ್ನಡ ಜಿಲ್ಲೆಯ ಶಿರ್ಶಿಯಲ್ಲಿ 21-09-1949 ರಂದು ಜನಿಸಿದರು. ತಂದೆ ಸದಾಶಿವ ಶಿರೂರ, ತಾಯಿ ಸರೋಜಿನಿ ಶಿರೂರ .
ಪ್ರಕಟಿತ ಕೃತಿಗಳು: ಪುಟಾಣಿ ಕಥಾ ಕುಸುಮ (ಮಕ್ಕಳ ಕತೆಗಳು), ಕಳೆದು ಕೊಂಡದ್ದು (ಕಥಾ ಸಂಕಲನ), ಕನ್ನಡಿಯಲ್ಲಿ ಕಂಡಾಗ (ಕಥಾ ಸಂಕಲನ), ನವನೀತ, ಪಯಣ (ಪ್ರವಾಸ ಕಥನ), ಅಜ್ಜನ ಮನೆ ಅಂಗಳದಲ್ಲಿ (ಲಲಿತ ಪ್ರಬಂಧ), ದಶರೂಪ(ಕ)ದ ಸುಬ್ಬಣ್ಣ (ವ್ಯಕ್ತಿ ಚಿತ್ರ), ಹನಿ-ಧ್ವನಿ (ಕವನ ಸಂಕಲನ), ಸುಹಾಸ (ನಗೆ ಲೇಖನಗಳು) ಹಾಸ್ಯ - ಅನುಭವದ ಅಡಿಗೆಯ ಮಾಡಿ (ಲಲಿತ ಪ್ರಬಂಧ)
ಅವರ ಸಾಹಿತ್ಯ ಸೇವೆಗೆ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಸಂದಿವೆ.