ವಿಜಯಾ ಮೋಹನ್ ತುಮಕೂರು ಜಿಲ್ಲೆಯ ಮಧುಗರಿ ತಾಲೂಕಿನ ಸುದ್ದೇಕುಂಟೆ (ಜನನ: 01-07-1968) ಗ್ರಾಮದವರು. ತಂದೆ ರಾಮಯ್ಯ, ತಾಯಿ ಸುಮಾನಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮಧುಗಿರಿಯಲ್ಲಿ ಪ್ರೌಢಶಿಕ್ಷಣ, ನಂತರ ಶ್ರೀ ಸಿದ್ಧಗಂಗಾ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಪಡೆದು, 1992ರಲ್ಲಿ ಗುಬ್ಬಿ ತಾಲೂಕು ಕಡಬಾ ಹೋಬಳಿ. ಮಾದಾಪಟ್ಟಣದ ಶಾಲೆಗೆ ಶಿಕ್ಷಕಿಯಾದರು. ಸದ್ಯಕ್ಕೆ ಮುಖ್ಯ ಶಿಕ್ಷಕಿ.
ಹುಟ್ಟಿನಿಂದ ದೈಹಿಕ ವಿಕಲ ಚೇತನರಾಗಿದ್ದ ಅವರಿಗೆ ಮೊದಲಿನಿಂದಲೂ ರಂಗಪ್ಪಜ್ಜ ತಾತನವರು ಹೇಳುತ್ತಿದ್ದ ವಿಸ್ಮಯಕಾರಿ ಕಥೆಗಳು ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾದವು. 1998ರಲ್ಲಿ ಬರೆದ ‘ನೇಣು’ ಕಥೆಗೆ (998) ದಿ’’ ಮೀನಾಕುಮಾರಿ ದತ್ತಿನಿದಿ ಕಥಾ ಸ್ಪರ್ಧೆಯಲ್ಲಿ.ಪ್ರಥಮ ಬಹುಮಾನ ಬಂದಿದೆ.
2009 ರಲ್ಲಿ ‘ತಬ್ಬಲಿ ಸಾರು’ ಕಥಾಸಂಕಲನ ಪ್ರಕಟವಾಗಿದೆ. ತರಂಗದಲ್ಲಿ (2011), ದಿ. ಎಂ ವ್ಯಾಸ ಅವರ ನೆನಪಿನಲ್ಲಿ ನಡೆದ. ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ `ನಂಜು ' ಕಥೆಗೆ ತೃತೀಯ ಬಹುಮಾನ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆ ಕಥಾಸ್ಪರ್ಧೆಯಲ್ಲಿ. `ಕಣ್ಣಿ' ಕಥೆಗೆ ಪ್ರಥಮ ಬಹುಮಾನ ಮತ್ತು, ಜಿಲ್ಲಾ ಲೇಖಕಿಯರ ಸಂಘ ಏರ್ಪಡಿಸಿದ್ದ ಕಥಾ ಸ್ಪರ್ದೆಯಲ್ಲಿ. ‘ಹುಟ್ಟಿದಬ್ಬ’ ಕಥೆಗೆ ಪ್ರಥಮ ಬಹುಮಾನ ಲಭಿಸಿದೆ.
ಕಣ್ಣಿ’ ಕಥಾಸಂಕಲನಕ್ಕೆ (2011) ಕಾದಂಬರಿಕಾರ್ತಿ ದಿ.. ತ್ರಿವೇಣಿ ದತ್ತಿ ನಿಧಿ ಪ್ರಶಸ್ತಿ, ಯಾದಗಿರಿ ತಾಲೂಕು ಗುರುಮಿಠಕಲ್ ನಲ್ಲಿ ‘ಅಕ್ಷರಲೋಕದ ನಕ್ಷತ್ರ ’ ಪ್ರಶಸ್ತಿ, 2012,ರಲ್ಲಿ `ನೀರು' ಸಣ್ಣ ಕಥೆಗೆ. ಸಂಕ್ರಮಣ ಸಾಹಿತ್ಯ ಪುರಸ್ಕಾರ, 2013 ರಲ್ಲಿ, ತರಂಗ ನಡೆಸಿದ ರಾಜ್ಯ ಮಟ್ಟದ ಮಿನಿ ಕಾದಂಬರಿ ಸ್ಪರ್ಧೆಯೊಳಗೆ ‘ನೀರು’ ಕಾದಂಬರಿ ಪ್ರಥಮ ಬಹುಮಾನ
‘ ಜಾತಿ’ ಕಥಾಸಂಕಲನಕ್ಕೆ, 2013 ನೇ ಸಾಲಿನ ಡಾ, ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ , 2014ರಲ್ಲಿ ದಿ. ಗೌರಮ್ಮ, ಕೆ ಮಂಜಪ್ಪ ದತ್ತಿನಿಧಿ ಪ್ರಶಸ್ತಿ ಲಭಿಸಿದೆ, 2014ರಲ್ಲೆ ‘ಮಳ್ಳು’ ಸಣ್ಣ ಕಥೆ ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ. 2011 ರ ನವೆಂಬರ್ ನಲ್ಲಿ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ವೀರಾಂಜನೇಯ ಸೇವಾ ಸಮಿತಿ ಮಧುಗಿರಿಯಲ್ಲಿ. ಗೆಳೆಯರ ಬಳಗದ ಆಶ್ರಯದಿಂದ `ಸಾಹಿತ್ಯ ಚಂದನ' ಬಿರುದು, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2016 ರಲ್ಲಿ, ವಾಸವಿ ಮಹಿಳಾ ಸಂಘದಿಂದ, ‘ವಾಸವಿ ಸಾಹಿತ್ಯ ಸಿರಿ’ ಬಿರುದು , 2017ರಲ್ಲಿ ಜಿಲ್ಲಾ ಕನಕ ಪ್ರಶಸ್ತಿ ಲಭಿಸಿದೆ.
2017ರಲ್ಲಿ ‘ಓಟು’ ಕಥಾ ಸಂಕಲನ ಬಿಡುಗಡೆಯಾಗಿದೆ. ಪ್ರಗತಿ ಟಿ.ವಿ.ಯು ನಮ್ಮೂರ ಸಾಧಕರು ಮಾಲಿಕೆಯಡಿ ಇವರನ್ನು ಸಂದರ್ಶಿಸಿದೆ. ಜಿಲ್ಲಾ ಲೇಖಕಿಯ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಇವರ ಐದು ಕೃತಿಗಳ ಬಗ್ಗೆ ಒಂದು ಅನುಸಂಧಾನ ಕಾರ್ಯಕ್ರಮ ಆಯೋಜಿಸಿದ್ದರು.