About the Author

ವರದಾ ಶ್ರೀನಿವಾಸ್, ಎಂ.ಎ., ಪಿಎಚ್.ಡಿ., ಹಿಂದಿ(ಪ್ರವೀಣ) ಸಂಸ್ಕೃತ ವಿಶಾರದ ಭಾಷಾಂತರಕಾರರು. ಕರ್ನಾಟಕ ಕಾನೂನು ಮಂಡಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜನಿಸಿದ್ದು 28-07-1950, ಕಾಸರಗೋಡಿನಲ್ಲಿ.  ತಂದೆ  ವಿ.ಕೆ. ನಾರಾಯಣ, ತಾಯಿ -ಕೆ. ಸುಂದರಿ.

ಕೃತಿಗಳು : ಸಮ್ಮೇಲ (ವಿಮರ್ಶೆ) 1982, ಸಂಕಿರಣ (ಲೇಖನಗಳು) 1990, ಮಹಿಳೆ - ವೈಚಾರಿಕತೆ ಮತ್ತು ವಿಮರ್ಶೆ 1991, ಮಕ್ಕಳ ಸಾಹಿತ್ಯಕ್ಕೆ ಡಾ ಶಿವರಾಮ ಕಾರಂತರ ಕೊಡುಗೆ - 1994, ಸ್ಮರಣೆ ಸೊಗಸು - 2000. ಕವನ ಸಂಕಲನ : ಮುಂಜಾವದ ಕನಸುಗಳು 1993, ಕನಸು ಮತ್ತು ವಾಸ್ತವಗಳ ನಡುವೆ 1998 ಮಕ್ಕಳ ಸಾಹಿತ್ಯ : ಪುಟ್ಟನ ಗಾಳಿಪಟ-86, ಪುಷ್ಪಕ ವಿಮಾನ-2000, ಹನ್ನೆರಡು ಕಥಾರತ್ನಗಳು, ಯಾರು ಶ್ರೇಷ್ಠರು, ಶೋಧ, ಏಕಲವ್ಯ ಮತ್ತು ಇತರ ನಾಟಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. 'ಕನ್ನಡ ನುಡಿ' ಪತ್ರಿಕೆ (1995-98), ಸ್ಪಟಿಕ ಮಂಜೂಷ 1986, ರಜತಸಿರಿ 1997. ಸಂಶೋಧನೆ : ಪಂಜೆ ಮಂಜೇಶರಾಯರ ಕೃತಿಗಳು ಒಂದು ಅಧ್ಯಯನ (ಪಿಹೆಚ್.ಡಿ. ಮಹಾಪ್ರಬಂಧ) ಜೀವನ ಚರಿತ್ರೆ : ಮಡಿವಾಳ ಮಾಚಯ್ಯ 1994, ಪಂಜೆ ಮಂಗೇಶರಾಯರು, ಸುಮಾನಸ ಪ್ರತಿಭಾ ಸಂಪನ್ನರು (ವ್ಯಕ್ತಿಚಿತ್ರ) ಮಹಿಳಾ ಅಧ್ಯಯನ : ಮಹಿಳೆ: ಸ್ಥಿತಿಗತಿ ಅಂದು ಇಂದು 1997 ರಲ್ಲಿ ಪ್ರಕಟವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಶೇಷಮ್ಮ ಭಾಸ್ಕರರಾವ್ ದತ್ತಿನಿಧಿ ಪ್ರಶಸ್ತಿ 1982, ಮಲ್ಲಿಕಾ ಪ್ರಶಸ್ತಿ 1983 'ಸಮ್ಮೇಲ' ಕೃತಿಗೆ ಜಿ.ಪಿ. ರಾಜರತ್ನಂ ಪ್ರಶಸ್ತಿ 1984, ಸಂಕ್ರಮಣ ಕಾವ್ಯ ಪ್ರಶಸ್ತಿ 1989, 'ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ' 1992, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ 2000ರಲ್ಲಿ ಇವರಿಗೆ ಲಭಿಸಿದೆ.

ವರದಾ ಶ್ರೀನಿವಾಸ