ಲೇಖಕ ವಿ.ಎಂ. ಜೋಶಿ ಅವರು 27 ವರ್ಷ ಕಾಲ ಖಾಸಗಿ ಕಾರ್ಖಾನೆಯಲ್ಲಿ ಸಹಾಯಕ ಪ್ರಬಂಧಕರಾಗಿ ಹಾಗೂ 22 ವರ್ಷ ಕಾಲ ತಾಂತ್ರಿಕ ತರಬೇತಿಯಲ್ಲಿ ಪ್ರಾಂಶುಪಾಲರಾಗಿ, ಈಗ ನಿವೃತ್ತರು. 1971 ರಿಂದ ಬರವಣಿಗೆ ಆರಂಭಿಸಿ ಈವರೆಗೆ ಒಟ್ಟು68 ಕಥೆಗಳನ್ನು ಬರೆದಿದ್ದು, ಎಲ್ಲವೂ ಪ್ರತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಯ್ದ ಕಥೆಗಳ ಒಟ್ಟು 3 ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಆ ಪೈಕಿ, ಕನ್ನಡದ ಕನ್ನಡಿ (ಕಥಾ ಸಂಕಲನ).