ಉಷಾ ವಸ್ತಾರೆ ಮೂಲತಃ ಗವಿಪುರ ಗುಟ್ಟಹಳ್ಳಿಯವರು.1965ರಲ್ಲಿ ಅವರ ಜನನ. ಅವರು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಬಿ.ಎಸ್ಸಿಯಲ್ಲಿ ಚಿನ್ನದ ಪದಕ, ಸೆಂಟ್ರಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ (ಎಂ.ಎಸ್ಸಿ) ರ್ಯಾಂಕ್ ಕೂಡಾ ಪಡೆದುಕೊಂಡರು. ನಂತರ 1981ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಿದರು. ಪೋಸ್ಟ್ ಡಾಕ್ಟರಲ್ ರಿಸರ್ಚ್ ಮಾಡಿದ ಬಳಿಕ ಫಿಲಡೆಲ್ಪಿಯಾದಲ್ಲಿರುವ ಟೆಂಪಲ್ ಯುನಿವರ್ಸಿಟಿಯ ಮೆಡಿಕಲ್ ಸ್ಕೂಲ್ ನಲ್ಲಿ ಫೇಕಲ್ಟಿಯಾಗಿ ಕೆಲಸ ಮಾಡಿದರು. 17 ವರ್ಷ ಸಂಶೋಧನೆ ಮಾಡಿದ ಬಳಿಕ ಅಲ್ಲಿಯೇ ನ್ಯೂರೊ ಸರ್ಜರಿ ಮತ್ತು ಫಿಸಿಯಾಲಜಿ ವಿಭಾಗಗಳಲ್ಲಿ ಫೇಕಲ್ಟಿಯಾಗಿದ್ದರು. ಇದೀಗ ನರವಿಜ್ಞಾನಿಯಾಗಿ (ನ್ಯೂರೊ ಸೈಂಟಿಸ್ಟ್) ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಿಗಳು; ಕಥೆ ಕೇಳೋಣ ಮನಸ್ಸು ಅರಿಯೋಣ, ಮೈಂಡ್‌ಫುಲ್ ಪೇರೆಂಟಿಂಗ್, ನಿಮಗೂ ಸ್ಟ್ರೆಸ್ ಇದೆಯಾ?