ಲೇಖಕ ಟಿ.ಕೆ. ಗಂಗಾಧರ ಪತ್ತಾರ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರದವರು. ತಂದೆ ಕೀ.ಶೇ. ಕಾಳಪ್ಪ ಪತ್ತಾರ. (ಪಂಡಿತ ರಾಜೀವ್ ತಾರಾನಾಥರಿಗೆ ಪ್ರಪ್ರಥಮವಾಗಿ ಸಂಗೀತ ಅಭ್ಯಾಸ ಮಾಡಿಸಿದವರು.) ಮೈಸೂರು ದಸರಾ, ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಗಡಿ ಸಾಹಿತ್ಯ ಸಮ್ಮೇಳನ ಹೀಗೆ ವಿವಿಧ ವೇದಿಕೆಗಳಡಿ ಕವಿತೆ ವಾಚನ, ಉಪನ್ಯಾಸಗಳನ್ನು ಮಂಡಿಸಿದ್ದಾರೆ. ದೂರದರ್ಶನ ಚಂದನದಲ್ಲಿ ಬೆಳಗು ಕಾರ್ಯಕ್ರಮ ಮತ್ದತು ಧಾರವಾಡ ಹಾಗೂ ಹೊಸಪೇಟೆ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿವೆ. ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಹೋಬಳಿ (2004) ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) ವೈದ್ಯಕೀಯ ಕಾಲೇಜಿನ ಕಚೇರಿ ಅಧೀಕ್ಷಕರಾಗಿ 32 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು.