ಲೇಖಕಿ ಪ್ರೊ ಸುಮಾ ವಸಂತ ಸಾವಂತ ಮೂಲತ: ಹಾವೇರಿ ಜಿಲ್ಲೆಯವರು. ತಂದೆ ವಸಂತರಾವ್ ತಾಯಿ ಕೃಷ್ಣ ಬಾಯಿ. ಪ್ರಾಥಮಿಕ,ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಹಾವೇರಿಯಲ್ಲಿ ಪೂರ್ಣಗಗೊಳಿಸಿ, ಹುಬ್ಬಳ್ಳಿಯಲ್ಲಿ ಬಿಎ ಹಾಗೂ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದಿಂದ ಎಂ ಎ ಪದವಿಯನ್ನು ರಾಂಕ್ ನೊಂದಿಗೆ ಪಡೆದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಎ.ಜಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರು.
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ .ಈವರೆಗೆ 18 ಲೇಖನಗಳು ಪ್ರತಿಷ್ಠಿತ ಪ್ರಕಾಶನದಡಿ ಪ್ರಕಟವಾಗಿವೆ.
ಕೃತಿಗಳು: ಸಂತ ಶರಣ ಸಾಹಿತ್ಯ , ಸಂತ ಶರಣರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು, ವಿಚಾರ ವಿನ್ಯಾಸ, ಶೋಧ ಸಂಚಯ ಇವರ ಪ್ರಮುಖ ಕೃತಿಗಳು.
ಪ್ರಶಸ್ತಿ-ಪುರಸ್ಕಾರಗಳು: ಪಿಯು ಮಂಡಳಿಯಿಂದ (2017-18) ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ , 018-19 ನೇ ಸಾಲಿನಲ್ಲಿ ನವದೆಹಲಿಯ ಇಂಟರ್ ನ್ಯಾಷನಲ್ ಬಿಸಿನೆಸ್ ಕೌನ್ಸಿಲ್- ನಿಂದ ‘ಭಾರತ ವಿದ್ಯಾರತ್ನ’ ಪುರಸ್ಕಾರಲಭಿಸಿದೆ.