ಸುಮಾ ರಮೇಶ್ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ, ಚಿಕ್ಕಮಗಳೂರಿನ ಮೌಂಟೇನ್ ವ್ಯೂ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಬ್ಯಾಸ ಹೈಸ್ಕೂಲು ಶಿಕ್ಷಣವನ್ನು ಪಡೆದರು. ಹಾಸನದ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ಕಮರ್ಶಿಯಲ್ ಪ್ರ್ಯಾಕ್ಟೀಸ್ ಡಿಪ್ಲೊಮಾ ಪಡೆದಿದ್ದು, ಎ ವಿ ಕಾಂತಮ್ಮ ಕಾಲೇಜು, ಹಾಸನದಲ್ಲಿ ಬಿ.ಕಾಂ.ಪದವಿ ಪಡೆದರು.
ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿಶೇಷ ಆಸಕ್ತಿ ಹೊಂದಿರುವ ಸುಮಾ ರಮೇಶ್ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಚದುರಂಗ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದವರು. ಶಿಕ್ಷಕಿ ಹಾಗು ಮುಖ್ಯ ಶಿಕ್ಷಕಿಯಾಗಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಗೃಹಿಣಿಯಾಗಿ ನೆಲೆಸಿರುವುದು ಹಾಸನದಲ್ಲಿ. ಕೃಷಿ ಹಾಗು ಸಾಹಿತ್ಯ ಕೃಷಿಯಲ್ಲಿ ವಿಶೇಷ ಒಲವು ಹೊಂದಿದವರು. ' ಸಸ್ಯ ಸಂಪದ ' ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದು ಅದರಲ್ಲಿ ಸಸ್ಯಗಳ ಬೆಳವಣಿಗೆ ಬಗೆಗೆ ವಿವರವಾದ ಮಾಹಿತಿ ಲಭ್ಯವಿದೆ. ಹಾಸ್ಯ ಲೇಖನ, ಲಲಿತ ಪ್ರಬಂಧ , ಕತೆ, ಕವನ , ಲೇಖನ ಹೀಗೆ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಇದುವರೆಗೂ ಇನ್ನೂರಕ್ಕೂ ಹೆಚ್ಚು ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ