ಮೈಸೂರಿನವರಾದ ಲೇಖಕಿ ಸುಜಾತಾ ಎನ್ ಅವರು ಸುಜಾತಾ ರವೀಶ್ ಎಂಬ ಕಾವ್ಯನಾಮವನ್ನು ಹೊಂದಿದ್ದಾರೆ. 18-04-1966ರಂದು ದಿ. ಎನ್ ನರಹರಿರಾವ್ ಹಾಗೂ ತಾಯಿ ದಿ. ಶಕುಂತಲಾ ಎನ್ ರಾವ್ ಮಗಳಾಗಿ ಜನಿಸಿದರು. ಎಂ ಕಾಂ ಪದವೀಧರೆಯಾಗಿದ್ದು, ಭಾರತೀಯ ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿಯಾಗಿದ್ದಾರೆ. ಹಲವಾರು ಬ್ಲಾಗ್ ಗಳಲ್ಲಿ ಅಂಕಣದ ಬರಹಗಳು ಕವನಗಳು ಗಜಲ್ ಗಳು ಪ್ರಕಟವಾಗಿವೆ . ಹಾಲಿ ಭಾವಸಂಗಮ ಟೆಲಿಗ್ರಾಂ ಬಳಗ ಹಾಗೂ ಶ್ರಾವಣ ಬ್ಲಾಗ್ಗಳಲ್ಲಿ ಅಂಕಣ ಬರೆಯುತ್ತಿದ್ದೇನೆ.ನಸುಕು, ಅವ್ವ ಪುಸ್ತಕಾಲಯ, ಸಂಗಾತಿ, ಸುರಹೊನ್ನೆ, ಶ್ರಾವಣ ಈ ಬ್ಲಾಗ್ ಗಳಲ್ಲಿ ಹಾಗೂ ಪ್ರತಿಲಿಪಿ ಮಾಮ್ಸ್ ಪ್ರೆಸ್ಸೋ ಆಪ್ಗಳಲ್ಲಿ ನಿಯಮಿತವಾಗಿ ಬರವಣಿಗೆ.ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಬಂಧಗಳು ಪ್ರಕಟವಾಗಿವೆ. ಇನ್ನೂ ಕೆಲವು ಸಂಪಾದಿತ ಕೃತಿಗಳಲ್ಲಿ ಪ್ರಬಂಧಗಳು ಪ್ರಕಟವಾಗಿವೆ .
ಸ್ವತಂತ್ರ ಕವನ ಸಂಕಲನ ಅಂತರಂಗದ ಆಲಾಪ ಪ್ರಕಟವಾಗಿದೆ .
ಪ್ರಶಸ್ತಿ ಮತ್ತು ಗೌರವಗಳು: ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ಸಿ ಕನ್ನಡ ಪಠ್ಯ ಪುಸ್ತಕಕ್ಕೆ "ಮುಖವಾಡಗಳು" ಕವನ ಆಯ್ಕೆಯಾಗಿ ಪ್ರಕಟಗೊಂಡಿದೆ.ರಾಜ್ಯ ಬರಹಗಾರರ ಸಂಘ ರಿಜಿಸ್ಟರ್ಡ್ ಇವರ ಸಂಸ್ಥೆಯಿಂದ "ಸಾಹಿತ್ಯ ಸಿಂಧು" ಪ್ರಶಸ್ತಿ ದೊರಕಿದೆ.